ಮುಂದುವರೆದ ಗಾಝಾ ನಾಗರಿಕರ ಹತ್ಯೆ: ಶಿಬಿರದ ಮೇಲೆ ಮತ್ತೆ ದಾಳಿ, ಕನಿಷ್ಠ 30 ಮಂದಿ ಸಾವು

Prasthutha|

ಗಾಝಾ: ಇಸ್ರೇಲ್ ಗಾಝಾ ಪಟ್ಟಿಯಲ್ಲಿ ನಾಗರಿಕ ಹತ್ಯಾಕಾಂಡವನ್ನು ಮುಂದುವರೆಸಿದೆ. ತಡರಾತ್ರಿ ಸೆಗಾಜಾದ ಶಿಬಿರವೊಂದರ ಮೇಲೆ ವಾಯು ದಾಳಿ ನಡೆಸು ಕನಿಷ್ಠ 30 ಮಂದಿಯನ್ನು ಕೊಂದು ಹಾಕಿದೆ. ಇದನ್ನು ಎಂದು ಹಮಾಸ್ ಆರೋಗ್ಯ ಸಚಿವಾಲಯ ದೃಢೀಕರಿಸಿದೆ. ಸೆಂಟ್ರಲ್ ಗಾಜಾ ಪಟ್ಟಿಯಲ್ಲಿರುವ ಅಲ್-ಮಘಾಝಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ದೇರ್ ಅಲ್-ಬಾಲಾಹ್ನಲ್ಲಿರುವ ಅಲ್-ಅಕ್ಸಾ ಮಾರ್ಟಿಯರ್ಸ್ ಆಸ್ಟತ್ರೆಗೆ ರವಾನಿಸಲಾಗಿದೆ. ವೈಮಾನಿಕ ದಾಳಿಗೆ ಹಲವು ಮನೆಗಳು ನೆಲಸಮಗೊಂಡಿವೆ ಎಂದು ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ತಿಳಿಸಿದ್ದಾರೆ.




Join Whatsapp