ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ಪರಸ್ಪರ ಗುಂಡಿನ ಚಕಮಕಿ

Prasthutha|

ಲೆಬನಾನ್: ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಇಸ್ರೇಲಿ ಲೆಬನಾನ್ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿದೆ. ಲೆಬನಾನ್-ಇಸ್ರೇಲ್ ಗಡಿಯಲ್ಲಿ ತನ್ನ ಪ್ರಬಲ ಗುಂಪು ಈಗಾಗಲೇ ಹೋರಾಟದಲ್ಲಿ ತೊಡಗಿದೆ ಎಂದು ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹೇಳಿದ ಒಂದು ದಿನದ ನಂತರ ಈ ಉದ್ವಿಗ್ನತೆ ಸಂಭವಿಸಿದೆ.

- Advertisement -

ಹಿಜ್ಬುಲ್ಲಾ ಶನಿವಾರ ಇದೇ ಮೊದಲ ಬಾರಿಗೆ ಲೆಬನಾನ್ ನ ಪ್ರಸಿದ್ಧ ಇಸ್ರೇಲಿ ಫೋಸ್ಟ್ ಮೇಲೆ ಎರಡು ಬುರ್ಕನ್ ರಾಕೆಟ್‌ ಗಳನ್ನು ಹಾರಿಸಿದೆ ಎಂದು ಬೈರುತ್ ಮೂಲದ ಅಲ್ ಮಯದೀನ್ ಟಿವಿ ನೆಟ್ ವರ್ಕ್ ವರದಿ ಮಾಡಿದೆ. ಇದೇ ಮೊದಲ ಬಾರಿಗೆ ಬುರ್ಕನ್ ರಾಕೆಟ್ ಗಳನ್ನು ಬಳಸಿರುವುದನ್ನು ಲೆಬನಾನ್ ನ ಭದ್ರತಾ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ರಾಕೆಟ್ ದಾಳಿಗಳು ಸೇರಿದಂತೆ ಹಲವಾರು ಇಸ್ರೇಲಿ ಸೇನಾ ಪೋಸ್ಟ್ ಗಳ ಮೇಲೆ ಹಿಜ್ಬುಲ್ಲಾ ಗುಂಪು ದಾಳಿ ಮಾಡಿದ್ದರಿಂದ ಇಸ್ರೇಲ್ ಸೇನೆ ಪ್ರತಿದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.




Join Whatsapp