ಮಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದ್ದು ಬರಗಾಲ ಛಾಯೆ ಮೂಡಿದೆ. ಹೀಗಾಗಿ ಸರ್ಕಾರವು ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಈಗಾಗಲೇ ಘೋಷಣೆ ಮಾಡಿದೆ.
ಬರ ಪೀಡಿತ ತಾಲೂಕುಗಳ ನಿರ್ವಹಣೆಗಾಗಿ ಸರ್ಕಾರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ 3 ಕೋ.ರೂ. ಮೀಸಲಿಡಲಾಗಿದೆ. ಉಡುಪಿ ಜಿಲ್ಲಾ ಬರ ನಿರ್ವಹಣೆಗೆ 4.50ಕೋ.ರೂ ಬಿಡುಗಡೆ ಮಾಡಿದೆ.