ಅರಬ್-ಗಲ್ಫ್-ಯುರೋಪಿಯನ್ ರಾಷ್ಟ್ರಗಳ ‘ಸ್ನೇಹ ವೇದಿಕೆ’ ಶೃಂಗ ಸಭೆ | ವಿದೇಶಾಂಗ ಸಚಿವರುಗಳು ಭಾಗಿ

Prasthutha|

ಅಥೆನ್ಸ್ : ನಾಲ್ಕು ಅರಬ್, ಗಲ್ಫ್ ಮತ್ತು ಎರಡು ಯುರೋಪಿಯನ್ ರಾಷ್ಟ್ರಗಳು ಗುರುವಾರ ಅಥೆನ್ಸ್ ನಲ್ಲಿ ನಡೆದ “ಸ್ನೇಹ ವೇದಿಕೆ” (ಫಿಲಿಯಾ ಫೋರಂ) ಶೃಂಗ ಸಭೆಯಲ್ಲಿ ಭಾಗವಹಿಸಿದವು.

- Advertisement -

ಸೌದಿ ಅರೇಬಿಯಾ, ಗ್ರೀಸ್, ಸೈಪ್ರಸ್, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಈ ಸಭೆಯಲ್ಲಿ ಭಾಗವಹಿಸಿದರು. ಕೋವಿಡ್ 19 ಸೋಂಕು ಸಂಕಷ್ಟ ಮತ್ತು ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಮಹತ್ವದ ಮಾತುಕತೆಗಳು ನಡೆದವು.

ಮೆಡಿಟರೇನಿಯನ್ ನಿಂದ ಗಲ್ಫ್ ವರೆಗೆ ಸ್ನೇಹ, ಶಾಂತಿ, ಸಮೃದ್ಧಿ ಬೆಳೆಸುವ ಉದ್ದೇಶದಡಿ ‘ಸ್ನೇಹ ವೇದಿಕೆ’ಯನ್ನು ರಚಿಸಲಾಗಿದೆ. ಸಭೆಯ ಬಳಿಕ, ಎಲ್ಲಾ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದರು.



Join Whatsapp