ನವದೆಹಲಿ: ಕೇಂದ್ರ ಸರಕಾರ ದೆಹಲಿ ಸಿಎಂ ಸೇರಿಸಿ ಆಮ್ ಆದ್ಮಿ ಪಾರ್ಟಿಯ ಎಲ್ಲಾ ಸದಸ್ಯರನ್ನು ಜೈಲಿಗೆ ಹಾಕಲು ಬಯಸಿದೆ. ಬಹುಶ ಅದು ಸಂಭವಿಸಿದರೆ ಆಶ್ಚರ್ಯವಿಲ್ಲ. ಹಾಗೆ ಆದರೆ ದೆಹಲಿ ಸರ್ಕಾರವನ್ನು ಜೈಲಿನಿಂದ ನಡೆಸಲಾಗುವುದು ಎಂದು ಎಎಪಿ ಹೇಳಿದೆ.
ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಈಗಾಗಲೇ ಸಮನ್ಸ್ ನೀಡಿದೆ. ಎಎಪಿ ನಾಯಕರು ಈಗಾಗಲೇ ಕೇಜ್ರಿವಾಲ್ ಅವರ ಬಂಧನದ ಸಾಧ್ಯತೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಎಎಪಿ ಏನು ಮಾಡಲಿದೆ ಎಂಬ ಪ್ರಶ್ನೆಗೆ ಎಎಪಿ ನಾಯಕ ಸೌರಭ್ ಭಾರದ್ವಾಜ್ ಉತ್ತರಿಸಿದ್ದಾರೆ. ಇಡೀ ಪಕ್ಷವೇ ಜೈಲಿನಲ್ಲಿದ್ದರೆ, ಸರ್ಕಾರ ಮತ್ತು ಪಕ್ಷವು ಜೈಲಿನಿಂದಲೇ ನಡೆಯಲಿದೆ ಎಂದು ಹೇಳಿದ್ದಾರೆ.
ನಮ್ಮ ಸರಕಾರ ನೀಡುತ್ತಿರುವ ಉಚಿತ ಶಿಕ್ಷಣ, ಉಚಿತ ವಿದ್ಯುತ್, ಉಚಿತ ನೀರು, ಉಚಿತ ಆಸ್ಪತ್ರೆಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳು ನಿಲ್ಲಬೇಕೆಂದು ಬಿಜೆಪಿ ಬಯಸುತ್ತದೆ. ಜನಕಾಳಜಿಯ ಸಿಎಂ ಸಿಅರವಿಂದ್ ಕೇಜ್ರಿವಾಲ್ ಇದಕ್ಕೆ ಸೊಪ್ಪು ಹಾಕುವವರಲ್ಲ ಎಂದು ಭಾರದ್ವಾಜ್ ಹೇಳಿದ್ದಾರೆ.