ಆಸ್ಪತ್ರೆ, ಆಶ್ರಯ ನೆಲೆಗಳಲ್ಲಿ ಇಸ್ರೇಲ್ ದಾಳಿ: ಅಮಾನವೀಯತೆಯನ್ನು ತಡೆಯಲು ಆಸ್ಪತ್ರೆ ಮುಖ್ಯಸ್ಥ ಕರೆ

Prasthutha|

- Advertisement -

ಗಾಝಾ: ಸ್ರೇಲಿ ಸೇನೆ ಗಾಝಾ ನಗರದ ಅಲ್ ಕುದ್ಸ್ ಆಸ್ಪತ್ರೆ ಸೇರಿದಂತೆ ಸಂತ್ರಸ್ತರು, ರೋಗಿಗಳು ಆಶ್ರಯಿಸಿರುವ ಆಸ್ಪತ್ರೆಗಳು ಹಾಗೂ ಶಾಲೆಗಳ ಸಮೀಪ ದಾಳಿಯನ್ನು ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ. ನಮ್ಮ ಜನರಿಗೆ ಈಗ ಆಶ್ರಯವೇ ಇಲ್ಲ. ಆಸ್ಪತ್ರೆ ಸೇರಿದಂತೆ ಪ್ರತಿ ಸ್ಥಳಗಳ ಮೇಲೆ ಇಸ್ರೇಲಿ ಸೇನೆ ದಾಳಿ ನಡೆಸಿದೆ. ಶಾಲೆಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆಯುತ್ತಿದ್ದಾರೆ.ಅಲ್ ಖುಡ್ಸ್ ಆಸ್ಪತ್ರೆಯ ಸುತ್ತಲಿನ ಪ್ರತಿಯೊಂದು ಕಟ್ಟಡವನ್ನು ಇಸ್ರೇಲ್ ಗುರಿಯಾಗಿಸಿಕೊಂಡಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.

ನಮ್ಮ ಆಸ್ಪತ್ರೆಯೊಳಗೆ 400 ಕ್ಕೂ ಹೆಚ್ಚು ರೋಗಿಗಳಿದ್ದಾರೆ. ಅವರನ್ನು ಸ್ಥಳಾಂತರಿಸುವುದು ಸಾಧ್ಯವೇ ಇಲ್ಲ. ಅವರನ್ನು ಸ್ಥಳಾಂತರಿಸುವುದು ಎಂದರೆ ಅವರನ್ನು ಕೊಲ್ಲುವುದು ಎಂದೇ ಅರ್ಥ ಎಂದು ಅವರು ಹೇಳಿದ್ದಾರೆ.

- Advertisement -

ಈ ಅಮಾನವೀಯ ದುರಂತವನ್ನು ತಡೆಯಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ ಎಂದಲದೂ ಅವರು ಹೇಳಿದ್ದಾರೆ.



Join Whatsapp