ರಾಜ್ಯಪಾಲರು ಬೆಂಗಳೂರನ್ನು ಸರಿಯಾಗಿ ಉಲ್ಲೇಖಿಸಬೇಕು: ಆಮ್‌ ಆದ್ಮಿ

Prasthutha|

- Advertisement -

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ ಸುವರ್ಣ ಮಹೋತ್ಸವ ಉದ್ಘಾಟಿಸಿದ ಸಂಬಂಧ ರಾಜ್ಯಪಾಲರ ಕಚೇರಿಯ ಮಾಧ್ಯಮ ಬಿಡುಗಡೆ ಪತ್ರದಲ್ಲಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಆಮ್‌ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು ಎಂದೇ ಉಲ್ಲೇಖಿಸಬೇಕು. ಬ್ಯಾಂಗಲೋರ್‌ ಎನ್ನುವುದು ತಪ್ಪು. ಬೆಂಗಳೂರು ಎಂಬುದು ಬೆಂಗಳೂರಿಗರ ಹೆಮ್ಮೆ ಸಂಕೇತ. ಕನ್ನಡಿಗರ ಪ್ರತಿಷ್ಠೆ. ಕರ್ನಾಟಕದ ರಾಜಧಾನಿಯ ಹೆಸರನ್ನು ಅಧಿಕೃತವಾಗಿ ಬೆಂಗಳೂರು ಎಂದು ಘೋಷಿಸಲಾಗಿದೆ. ಹಾಗಾಗಿ ಅಧಿಕೃತ ಹೇಳಿಕೆಗಳಲ್ಲಿ ಬೆಂಗಳೂರು ಎಂದೇ ಬಳಕೆ ಮಾಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ರಮೇಶ್‌ ಬೆಲ್ಲಂಕೊಂಡ ಮನವಿ ಮಾಡಿದ್ದಾರೆ.

- Advertisement -

ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಮೇಶ್‌ ಬೆಲ್ಲಂಕೊಂಡ ಪತ್ರ ಬರೆದಿದ್ದಾರೆ.

2005ರ ಡಿಸೆಂಬರ್‌ 11ರಂದು ಬ್ಯಾಂಗಲೋರ್‌ ಹೆಸರನ್ನು ಬೆಂಗಳೂರು ಎಂದು ಅಧಿಕೃತವಾಗಿ ದಾಖಲಿಸಬೇಕು ಎಂಬ ಜ್ಞಾನಪೀಠ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಅವರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸಿದ್ದರು. 2006 ಸೆಪ್ಟೆಂಬರ್‌ 27ರಂದು ‘ಬೆಂಗಳೂರು’ ಎಂಬ ಹೆಸರನ್ನು ಘೋಷಿಸಿ ಬಿಬಿಎಂಪಿ ಅಧಿಕೃತ ನಿರ್ಣಯವನ್ನು ಅನುಮೋದಿಸಿತ್ತು ಎಂಬುದನ್ನು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.



Join Whatsapp