ಮಲೆನಾಡಲ್ಲಿ ಹುಲಿ ಉಗುರು, ಚರ್ಮ ಇರುವುದು ಸಾಮಾನ್ಯ: ಎಂ ಪಿ ಕುಮಾರಸ್ವಾಮಿ

Prasthutha|

ಬೆಂಗಳೂರು : ಮಲೆನಾಡಿನ ಮನೆಗಳಲ್ಲಿ ಹುಲಿ ಉಗುರು, ಪ್ರಾಣಿಗಳ ಚರ್ಮ, ಕೊಂಬು ಇರೋದು ಸಾಮಾನ್ಯ. ಈಗ ಅವರನ್ನು ವಿಲನ್ ಮಾಡುವುದಕ್ಕೆ ಹೊರಟಿರುವುದು ತಪ್ಪು ಎಂದು ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೂರು ನಾಲ್ಕು ದಿನದಿಂದ ಹುಲಿ ಉಗುರು ವಿಚಾರ ಚರ್ಚೆಯಾಗ್ತಿದೆ. ನಾನು ಮಲೆನಾಡಿನವನಾಗಿದ್ದೇನೆ. ಮಾನವ ಆದಿಕಾಲದಿಂದ ಬೇಟೆ ಮಾಡಿ ಬದುಕಿದ್ದ. 25 ವರ್ಷಗಳಿಂದ ಯಾವುದೇ ಶಿಕಾರಿ ಮಾಡುತ್ತಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಲಾಗ್ತಿದೆ. ಪ್ರಾಣಿಗಳ ಯಾವುದಾದರು ಒಂದು ವಸ್ತು ಮನೆಯಲ್ಲಿ ಇರಬಹುದು. ಇದನ್ನು ಶಿಕಾರಿ ಮಾಡಿ ತಂದಿದ್ದಾರೆ ಎಂದು ಬಿಂಬಿಸಬಾರದು ಎಂದು ಮನವಿ ಮಾಡಿದರು.



Join Whatsapp