ರೈಲಿಗೆ ಸಿಲುಕಿ ಕರ್ನಾಟಕದ ಮೂವರು ವಿಕಲಚೇತನ ಮಕ್ಕಳು ಮೃತ್ಯು

Prasthutha|

ಚೆನ್ನೈ: ಉರಕ್ಕಂ ಬಳಿ ಇಬ್ಬರು ಸಹೋದರರು ಸೇರಿದಂತೆ ಮೂವರು ವಿಕಲಚೇತನ ಮಕ್ಕಳು ರೈಲಿಗೆ ಸಿಲುಕಿ ಸಾವಿಗೀಡಾಗಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ‌ ಮಕ್ಕಳು ಕರ್ನಾಟಕದವರಾಗಿದ್ದು, 11 ರಿಂದ 15 ವರ್ಷದೊಳಗಿನ ವಯಸ್ಸಿನವರು. ಇಬ್ಬರು ಸಹೋದರರು ಕಿವುಡ ಮತ್ತು ಮೂಗರಾಗಿದ್ದರು ಮತ್ತು ಮೂರನೆಯವನಿಗೆ ಮಾತು ಬರುತ್ತಿರಲಿಲ್ಲ. ಅವರ ಪೋಷಕರು ಚೆನ್ನೈನಲ್ಲಿ ದಿನಗೂಲಿ ನೌಕರರಾಗಿದ್ದರು.

- Advertisement -

ಸುರೇಶ್ (15), ಅವರ ಸಹೋದರ ರವಿ (12) ಮತ್ತು ಮಂಜುನಾಥ್ (11) ಮೃತರಾದ ಮಕ್ಕಳು. ರೈಲು ಬರುವುದನ್ನು ಗಮನಿಸಿದೆ ಹಳಿ ದಾಟುವ ವೇಳೆ ರೈಲಿನಿಂದ ಹೊಡೆಸಿಕೊಂಡಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp