►’ಬಿಜೆಪಿಗಿಂತ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ‘
ಮೈಸೂರು: ರಾಜಕೀಯದಲ್ಲಿ ವಿಲನ್ ಅಂತ ಇದ್ದರೆ ಅದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರ ಬೀಳುವಾಗ ಅಮೆರಿಕದಲ್ಲಿದ್ರು, ಅದಕ್ಕೆ ಏನು ಹೇಳಬೇಕು? ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟೆಂಡ್ ನಲ್ಲೇ ಕಾಲ ಕಳೆದರು. ವಿಧಾನಸಭೆಯಲ್ಲಿ ಬಿಜೆಪಿಯವೇ ಸರ್ಕಾರ ಬೀಳಿಸಿದ್ದು ಅಂತಾ ಹೇಳಿದ್ದರು. ಅಸೆಂಬ್ಲಿಯಲ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸಚಿವರು, ಶಾಸಕರನ್ನು ಭೇಟಿ ಮಾಡದೆ ಹೋಟೆಲ್ ನಲ್ಲಿ ಕುಮಾರಸ್ವಾಮಿ ಕೂತಿದ್ದರು. ರಾಜಕೀಯವಾಗಿ ಹತಾಶೆರಾಗಿ ಬಾಯಿಗೆ ಬಂದ ರೀತಿ ಮಾತಾಡುತ್ತಿದ್ದಾರೆ. ಬಿಜೆಪಿಗಿಂತ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ.