ಮಹತ್ವದ ತಿರುವು | ಪಾವೂರು ಗ್ರಾಮ ಪಂಚಾಯತ್ ನಲ್ಲೂ SDPI ಅಧಿಕಾರಕ್ಕೆ!

Prasthutha|

ಮಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ. ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಖಮರುನ್ನೀಸಾ ಪಾವೂರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು.

- Advertisement -

ಉಪಾಧ್ಯಕ್ಷರಾಗಿ ಎಸ್ ಡಿಪಿಐ ಬೆಂಬಲಿತ ಮುಹಮ್ಮದ್ ಅನ್ಸಾರ್ ಇನೋಳಿ ಆಯ್ಕೆಯಾದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಾವೂರು ಗ್ರಾಮ ಪಂಚಾಯತ್ ನಲ್ಲಿ ಅಚ್ಚರಿದಾಯಕವಾಗಿ ಈ ಬಾರಿ ಎಸ್ ಡಿಪಿಐ ಬೆಂಬಲಿತರು ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದ್ದರು.

ಒಟ್ಟು 15 ಸ್ಥಾನಗಳಿರುವ ಪಂಚಾಯತ್ ನಲ್ಲಿ ಬಹುಮತಕ್ಕೆ ಎಂಟು ಸದಸ್ಯರ ಬೆಂಬಲ ಅಗತ್ಯವಿತ್ತು, ಆದರೆ, ಎಸ್ ಡಿಪಿಐ 6, ಕಾಂಗ್ರೆಸ್ 5 ಮತ್ತು ಬಿಜೆಪಿ 2, ಜೆಡಿಎಸ್ 2 ಸ್ಥಾನಗಳನ್ನು ಮಾತ್ರ ಗೆದ್ದಿದ್ದವು. ಅತಿಹೆಚ್ಚು ಬೆಂಬಲಿತರನ್ನು ಹೊಂದಿದ್ದ ಎಸ್ ಡಿಪಿಐಗೆ 2 ಹೆಚ್ಚುವರಿ ಮತಗಳು ಬಿದ್ದಿದ್ದು, ಆ ಮೂಲಕ, ಪಂಚಾಯತ್ ಅಧಿಕಾರ ಎಸ್ ಡಿಪಿಐ ಪಾಲಾಗುವಂತಾಗಿದೆ.  

- Advertisement -

ಕಳೆದ ಬಾರಿ ಪಾವೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಮಾತ್ರವಲ್ಲದೆ, ಒಟ್ಟು 15 ಸ್ಥಾನಗಳಲ್ಲಿ 14 ಸ್ಥಾನಗಳನ್ನೂ ತಮ್ಮದಾಗಿಸಿಕೊಂಡಿತ್ತು. ಒಂದು ಸ್ಥಾನ ಮಾತ್ರ ಬಿಜೆಪಿ ಗೆದ್ದಿತ್ತು.   



Join Whatsapp