ಮಂಗಳೂರು: ಬೀಚ್ ನಲ್ಲಿ ಮುಳುಗಿ ಬಾಲಕಿ ಸಾವು

Prasthutha|

ವಿಟ್ಲ: ಬೀಚ್ ನಲ್ಲಿ ಮುಳುಗಿ ಬಾಲಕಿ ಮೃತಪಟ್ಟಿರುವ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.

- Advertisement -

ರಜಾ ಹಿನ್ನೆಲೆ ಬೀಚ್ ಗೆ ತೆರಳಿದ್ದ 6 ಮಂದಿ ವಿದ್ಯಾರ್ಥಿಗಳ ಪೈಕಿ ನಿಶಾ ಮೃತಟ್ಟಿದ್ದಿದ್ದಾರೆ.

ನಿಶಾ ಮೂಲತಃ ನೇಪಾಳ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾಳೆ.

- Advertisement -

ವಿಟ್ಲ ಮೂಲದ ದಿಗಂತ (15) ದಿವ್ಯರಾಜ್ (15) ತೇಜಸ್ (14) ಕೀರ್ತನ್ (16) ಅಶ್ಮಿತಾ (15) ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಲ್ಲಿ ಆಟ ಆಡಲು ತೆರಳಿದಾಗ ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದು, ಇವರನ್ನು ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದು, ನಾಲ್ಕು ಜನ ಆರೋಗ್ಯವಾಗಿದ್ದು, ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.



Join Whatsapp