ಅದಾನಿ ಸಮೂಹ ಜನಸಾಮಾನ್ಯರ  12 ಸಾವಿರ ಕೋಟಿ ರೂ. ಸುಲಿಗೆ ಮಾಡಿದೆ: ರಾಹುಲ್ ಗಾಂಧಿ

Prasthutha|

ನವದೆಹಲಿ: ಅದಾನಿ ಸಮೂಹ ಜನಸಾಮಾನ್ಯರ  12 ಸಾವಿರ ಕೋಟಿ ರೂ. ಸುಲಿಗೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ಧಾರೆ. ವಿದ್ಯುತ್‌ ದರ ಹೆಚ್ಚಳದ ಮೂಲಕ ಅದಾನಿ ಸಮೂಹವು ಜನಸಾಮಾನ್ಯರಿಂದ  ಬೃಹತ್ ಲೂಟಿ ಮಾಡಿದೆ. 12 ಸಾವಿರ ಕೋಟಿ ರೂ.  ಸುಲಿಗೆ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಇಂಡೊನೇಷ್ಯಾದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ಹೆಚ್ಚಿನ ದರ ಪಾವತಿಸಲಾಗಿದೆ ಎಂದು ದಾಖಲೆ ತೋರಿಸಿದ ರಾಹುಲ್, ಅದಾನಿ ಸಮೂಹವು ಜನರ ಜೇಬಿನಿಂದ ಹಣವನ್ನು ‘ನೇರವಾಗಿ’ ಪಡೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಜನರಿಗಾಗುವ ಈ ಹೊರೆ ತಪ್ಪಿಸಲು ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ವಿದ್ಯುತ್ತನ್ನು 200 ಯೂನಿಟ್‌ವರೆಗೆ ಉಚಿತವಾಗಿ ನೀಡುತ್ತಿದೆ. ಮಧ್ಯಪ್ರದೇಶದಲ್ಲೂ ಇಂಥದ್ದೇ ಭರವಸೆ ನೀಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

- Advertisement -

ಫೈನ್ಯಾನ್ಶಿಯಲ್‌ ಟೈಮ್ಸ್‌’ನಲ್ಲಿ ಈ ಕುರಿತು ಈಚೆಗೆ ಪ್ರಕಟವಾಗಿರುವ ವರದಿಯೊಂದನ್ನು ಪ್ರಸ್ತಾಪಿಸಿದ ರಾಹುಲ್, ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಅವರು ಮೌನವಾಗಿರುವುದು ಏಕೆ ಎಂದು ಕೇಳಿದ್ದಾರೆ. ಮೋದಿ ಅದಾನಿಯನ್ನು  ರಕ್ಷಿಸುತ್ತಿದ್ದಾರೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಅದಾನಿ ಲೂಟಿಯ ಮೊತ್ತವು ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದ್ದಾರೆ.

ಫೈನಾನ್ಶಿಯಲ್‌ ಟೈಮ್ಸ್‌ನಲ್ಲಿ ಬಂದಿರುವ ವರದಿಯು ಸರ್ಕಾರವನ್ನು ಉರುಳಿಸುವಷ್ಟು ದೊಡ್ಡ ಸುದ್ದಿ. ಪ್ರಧಾನಿ ಅವರಿಂದ ಮತ್ತೆ, ಮತ್ತೆ ಮತ್ತೆ ರಕ್ಷಿಸಲ್ಪಡುತ್ತಿರುವ ವ್ಯಕ್ತಿಯೊಬ್ಬ ನೇರವಾಗಿ ಕಳ್ಳತನ ನಡೆಸಿದ ಸುದ್ದಿ ಇದು. ಯಾವುದೇ ಮಾಧ್ಯಮದವರು ಈ ಸುದ್ದಿಯನ್ನು ಕೈಗೆತ್ತಿಕೊಳ್ಳಲು ಆಸಕ್ತಿ ತೋರದಿರುವುದು ಅಚ್ಚರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಿದ್ಯುತ್‌ಗೆ ಸಬ್ಸಿಡಿ ನೀಡುತ್ತಿರುವ ಕಾಂಗ್ರೆಸ್‌ ಆಡಳಿತವಿರುವ ರಾಜ್ಯ ಸರ್ಕಾರಗಳು ಅದಾನಿ ಸಮೂಹದ ವಿರುದ್ಧ ತನಿಖೆಗೆ ಮುಂದಾಗುತ್ತವೆಯೇ ಎಂದು ಪ್ರಶ್ನಿಸಿದಾಗ ಈ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.



Join Whatsapp