ಸಾವಿತ್ರಿ ಜಿಂದಾಲ್: ಭಾರತದ ಅತ್ಯಂತ ಶ್ರೀಮಂತ ಮಹಿಳೆ

Prasthutha|

-ಭಾರತದ ಟಾಪ್‌ 10 ಶ್ರೀಮಂತರಲ್ಲಿ ಬೆಂಗಳೂರಿನ ಸಾವಿತ್ರಿ ಜಿಂದಾಲ್ಏಕೈಕ ಮಹಿಳೆ

- Advertisement -

ಬೆಂಗಳೂರು: ಜಾಗತಿಕ ಸ್ವಯಂ ನಿರ್ಮಿತ ಬಿಲಿಯನೇರ್‌ಗಳಲ್ಲಿ ಭಾರತವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ ಭಾರತದ ಟಾಪ್ 10 ಶ್ರೀಮಂತರಲ್ಲಿ ಸಾವಿತ್ರಿ ಜಿಂದಾಲ್ ಏಕೈಕ ಮಹಿಳೆ ಎಂಬ ಸ್ಥಾನ ಪಡೆದಿದ್ದಾರೆ.

ಇದೀಗ ಭಾರತದ ಶ್ರೀಮಂತ ಮಹಿಳೆಯರಲ್ಲಿ 73 ವರ್ಷದ ಸಾವಿತ್ರಿ ಜಿಂದಾಲ್ ಮೊದಲ ಸ್ಥಾನದಲ್ಲಿದ್ದಾರೆ. 73 ವರ್ಷದ ಸಾವಿತ್ರಿ ಜಿಂದಾಲ್ OP ಜಿಂದಾಲ್ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷರಾಗಿದ್ದಾರೆ. ಇದೀಗ ಅವರು 2023 ರಲ್ಲಿ ಭಾರತದ ಟಾಪ್ 10 ಶ್ರೀಮಂತ ವ್ಯಕ್ತಿಗಳಲ್ಲಿ ಏಕೈಕ ಮಹಿಳಾ ಬಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಅವರ ನಿವ್ವಳ ಮೌಲ್ಯ 25.6 ಬಿಲಿಯನ್‌ ಆಗಿದೆ.

- Advertisement -

ಜಿಂದಾಲ್ ಗ್ರೂಪ್ ಉಕ್ಕು ಮತ್ತು ವಿದ್ಯುತ್ ಸಮೂಹವಾಗಿದೆ. ಸಾವಿತ್ರಿ ಜಿಂದಾಲ್ ಹರಿಯಾಣ ಸರ್ಕಾರದಲ್ಲಿ ಸಚಿವರಾಗಿದ್ದರು. ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನಸಭಾ ಸದಸ್ಯರಾಗಿದ್ದರು. 2014ರಲ್ಲಿ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಾವಿತ್ರಿ ಜಿಂದಾಲ್ ಸೋತರು. ಪತಿಯ ಮರಣದ ನಂತರ ಅವರು ಜಿಂದಾಲ್ ಗ್ರೂಪಿನ ಅಧ್ಯಕ್ಷರಾದರು.

ಒಪಿ ಜಿಂದಾಲ್ ಅವರು 2005 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಪತಿ O.P. ಜಿಂದಾಲ್ ಮರಣದ ನಂತರ ಅವರ ಸಾಮ್ರಾಜ್ಯವನ್ನು ಅಸ್ಸಾಂ ಮೂಲದ ಸಾವಿತ್ರಿ ಜಿಂದಾಲ್ ಪಡೆದರು.

ಒಪಿ ಜಿಂದಾಲ್ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷೆ ಮತ್ತು ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಇದೀಗ ಉಕ್ಕಿನ ಉದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ಅವರನ್ನು ಹಿಂದಿಕ್ಕಿ ದೇಶದ ಏಳನೇ ಶ್ರೀಮಂತ ವ್ಯಕ್ತಿಯಾಗಿ ಮತ್ತು ದೇಶದ ಶ್ರೀಮಂತ ಮಹಿಳೆಯರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ..



Join Whatsapp