ಶಕ್ತಿ ಯೋಜನೆ: ಬೇಕಾಬಿಟ್ಟಿಯಾಗಿ ಫ್ರೀ ಟಿಕೆಟ್ ಹರಿಯುತ್ತಿದ್ದ ಸರ್ಕಾರಿ ಬಸ್ ಕಂಡೆಕ್ಟರ್

Prasthutha|

ಬೆಂಗಳೂರು: ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಬಿಎಂಟಿಸಿ ಬಸ್ ನಿರ್ವಾಹಕರು ಇನ್ಸೆಂಟಿವ್ ಆಸೆಗೋಸ್ಕರ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಬೀಸಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -


ಮೆಜೆಸ್ಟಿಕ್ ನಿಂದ – ತಾವರಕೆರೆಗೆ ಹೋಗುವ (242-ಬಿ) ಬಿಬಿಎಂಟಿಸಿ ಬಸ್ ನ ಕಂಡೆಕ್ಟರ್ ಅದಿತ್ಯವಾರ ಸುಖಾಸುಮ್ಮನೇ ಫ್ರೀ ಟಿಕೆಟ್ ಹರಿದು ಬಿಸಾಕುತ್ತಿದ್ದನು. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು “ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು” ತರಾಟೆಗೆ ತೆಗೆದುಕೊಂಡಿದ್ದಾರೆ.


ಈ ಮೂಲಕ ಕಂಡೆಕ್ಟರ್ ವಿಭಾಗಕ್ಕೆ ಹೆಚ್ಚಿನ ಪ್ರಯಾಣಿಕರ ಲೆಕ್ಕವನ್ನು ತೋರಿಸಲು ಮುಂದಾಗಿದ್ದಾರೆ. ಅಲ್ಲದೆ ಹೆಚ್ಚು ಫ್ರೀ ಟಿಕೆಟ್ ಹರಿದರೇ ತನಗೆ ಹೆಚ್ಚು ಇನ್ಷೆಂಟಿವ್ ಸಿಗುತ್ತದೆ ಎಂಬ ಆಸೆಯಿಂದ ಫ್ರೀ ಟಿಕೆಟ್ ಹರಿದಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾರೆ.



Join Whatsapp