ಏಕದಿನ ವಿಶ್ವಕಪ್ ನಲ್ಲಿ ಸತತ 8 ನೇ ಬಾರಿ ಪಾಕ್ ವಿರುದ್ಧ ಭಾರತದ ವಿಜಯ

Prasthutha|

ಅಹ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 12 ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್ ಗಳ ಭಾರತ ಜಯಗಳಿದೆ. ಹೈದರಾಬಾದ್ ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಪ್ರಥಮ ಬಾರಿ ಭಾರತನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ  ಪಾಕಿಸ್ತಾನ ಅಘಾತ ಎದುರಿಸಿದೆ.

 

ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್, ಭಾರತೀಯ ಬೌಲರ್ ಗಳ ಸಂಘಟಿತ ಪ್ರಯತ್ನದಿಂದಾಗಿ ಪಾಕಿಸ್ತಾನ ಏಕದಿನ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ 8 ನೇ ಬಾರಿ ಸೋತಿದೆ.

 

ಪಾಕಿಸ್ತಾನ ನೀಡಿದ 192 ರನ್ ಆಲ್ಪ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಜ್ವರದಿಂದ ಚೇತರಿಕೊಂಡು ಪಂದ್ಯಕ್ಕೆ ಲಭ್ಯರಾಗಿದ್ದ ಶುಭಮನ್ ಗಿಲ್ 16 ರನ್ ಗೆ ಶಾಹಿನ್ ಆಫ್ರಿದಿ ಗೆ ವಿಕೆಟ್ ನೀಡುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಜೊತೆಯಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಕ್ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರಾದರೂ ಕೊಹ್ಲಿ 16 ರನ್ ಗೆ ಹಸನ್ ಅಲಿ ಬೌಲಿಂಗ್ ನಲ್ಲಿ ಮೊಹಮ್ಮದ್ ನವಾಝ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್ ಸಹಿತ 86 ರನ್ ಗಳ ಸ್ಪೋಟಕ ಬ್ಯಾಟಿಂಗ್ ಆಡಿದರು. ಆದರೆ 21.4 ಓವರ್ ನಲ್ಲಿ ಶಾಹಿನ್ ಆಫ್ರಿದಿ ಗೆ ಬೌಲಿಂಗ್ ನಲ್ಲಿ ಔಟ್ ಆಗಿ ರೋಹಿತ್ ಶರ್ಮಾ ನಿರ್ಗಮಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ಶ್ರೇಯಸ್ ಐಯ್ಯರ್ 2 ಬೌಂಡರಿ 3 ಸಿಕ್ಸರ್ ಸಹಿತ 53 ರನ್ ಗಳಿಸಿದರೆ, ಅವರಿಗೆ ಸಾಥ್ ನೀಡಿದ್ದ ವಿಕೆಟ್ ಕೀಪರ್ ಕೆ ಎಲ್ ರಾಹುಲ್ 13 ರನ್ ಬಾರಿಸಿದರು.

ಪಾಕ್ ಪರ ಶಾಹಿನ್ ಆಫ್ರಿದಿ 2 ವಿಕೆಟ್  ಮತ್ತು ಹಸನ್ ಅಲಿ ಒಂದು ವಿಕೆಟ್ ಕಬಳಿಸಿದರು.

 

ಇಂದು ನಡೆದ  ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡೋ- ಪಾಕ್ ಪಂದ್ಯದ ಮೇಲೆ ಅಭಿಮಾನಿಗಳು ಹೆಚ್ಚು ನೀರೀಕ್ಷೆ ಇಟ್ಟುಕೊಂಡಿದ್ದರು. ಪ್ರಪಂಚದ ಅತೀ ದೊಡ್ಡ ಅಹ್ಮದಾಬಾದ್ ಸ್ಟೇಡಿಯಂನ ಒಂದು ಲಕ್ಷ ಮೂವತ್ತು ಸಾವಿರ ಆಸನಗಳು ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು.

 

ಭಾರತ ಟಾಸ್ ಗೆದ್ದು ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ಭಾರತೀಯ ಬೌಲರ್ ಗಳ ಸಂಘಟಿತ ಪ್ರಯತ್ನ ಪಾಕ್ ತಂಡ ವನ್ನು ಇನ್ನಿಲ್ಲದಂತೆ ಕಾಡಿತು. ಪಾಕ್ ಚೇತರಿಸಿಕೊಳ್ಳಲು ಅವಕಾಶ ನೀಡದೇ ಭಾರತ ಆಕ್ರಮಣಕಾರಿ ಬೌಲಿಂಗ್ ಮಾಡಿತು. ಪರಿಣಾಮ ಪಾಕ್ 191 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.



Join Whatsapp