ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ: ಸ್ವಪಕ್ಷದ ವಿರುದ್ಧವೇ ಸೋಮಣ್ಣ ಅಸಮಾಧಾನ

Prasthutha|

- Advertisement -

ಬೆಂಗಳೂರು: ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ ಎಂದು ಮಾಜಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ. ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ. ಕಾಂಗ್ರೆಸ್​ನಲ್ಲಿ ನಿಂತು ಗೆದ್ದಿದ್ದೇನೆ. ಹಾಗೇ ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ . ಬಿಜೆಪಿ ಬಂದು ಸೋತೆ . ನಾನು ಏನಾಗಿಬಿಡುತ್ತೇನೆ ಎನ್ನುವ ಭಯದಲ್ಲಿ ಸೋಲಿಸಿದರು ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದರು.

- Advertisement -

ಬಿಹಾರದಲ್ಲಿ ಜಾತಿ ಗಣತಿ‌ ಬಿಡುಗಡೆ ವಿಚಾರವಾಗಿ ಮಾತನಾಡಿ, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. 2015ರಲ್ಲಿ ಜಾತಿ ಗಣತಿ ವರದಿಯನ್ನ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಈ ಸಮಾಜವನ್ನ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಬಸವ ಜಯಂತಿ ಕಾರ್ಯಕ್ರಮ ಎರಡು ದಿನ ನಡೆದಿದೆ. ಬೇರೆಯದನ್ನ ಬಿಟ್ಟು ಅರ್ಹತೆ ಇದೆ ಅಂತಹರಿಗೆ ಅವಕಾಶ ಕೊಡಿ. ನೀವುಗಳು ಒಗ್ಗಟ್ಟಾಗಬೇಕು. ಇಲ್ಲ ಅಂದ್ರೆ ಹೇಳೋರೋ ಕೇಳೋರೊ ಇಲ್ಲದಂತಾಗುತ್ತದೆ ಎಂದರು.



Join Whatsapp