ನಟ ದರ್ಶನ್ ಜೊತೆ ಮನಸ್ತಾಪ ಇರುವುದು ನಿಜ: ಧ್ರುವ ಸರ್ಜಾ

Prasthutha|

ಬೆಂಗಳೂರು: ಕನ್ನಡದ ನಟ ದರ್ಶನ್ ಜೊತೆ ನನಗೆ ಮನಸ್ತಾಪವಿರುವುದು ನಿಜ. ಆದರೆ, ಅದನ್ನು ಬೆಳೆಸಿಕೊಂಡು ಹೋಗುವ ಅಗತ್ಯವಿಲ್ಲ ಎಂದು ನಟ ಧ್ರುವ ಸರ್ಜಾ ಹೇಳಿದರು.

- Advertisement -

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ದರ್ಶನ್ ಅವರಿಗೆ ನನ್ನ ಬಳಿ ಎರಡು ಪ್ರಶ್ನೆಗಳಿವೆ. ವೈಯಕ್ತಿಕವಾಗಿ ಅವರನ್ನು ಭೇಟಿಯಾದಾಗ ಇದನ್ನು ಅವರ ಬಳಿಯೇ ಕೇಳಿ ಸ್ಪಷ್ಟೀಕರಣ ಪಡೆಯುತ್ತೇನೆ. ಅವರು ನನ್ನ ಪಾಲಿನ ಹಿರಿಯ ನಟ. ನಮ್ಮ ಚಿತ್ರಗಳನ್ನು ಬೆಂಬಲಿಸಿದ್ದಾರೆ. ಆ ಬಗ್ಗೆ ಗೌರವವಿದೆ’ ಎಂದರು.


ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಕಾವೇರಿ ನೀರು ಕುರಿತ ಅನ್ಯಾಯದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ದರ್ಶನ್ ಹಾಗೂ ಧ್ರುವ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡಿರಲಿಲ್ಲ. ಆ ಬಗ್ಗೆ ಪ್ರತಿಕ್ರಿಯಿಸಿರುವ ಧ್ರುವ, ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಮಾಡಿಕೊಂಡು ಈ ಮನಸ್ತಾಪವನ್ನು ಬೆಳೆಸುವ ಅಗತ್ಯವಿಲ್ಲ ಎಂದೂ ಅವರು ಮನವಿ ಮಾಡಿದರು.



Join Whatsapp