ಹೊಸದಿಲ್ಲಿ : ದೇಶದಲ್ಲಿ ಹೊಸ ವರ್ಗದ ‘ಆಂದೋಲನ ಜೀವಿ’ಗಳು ಹುಟ್ಟಿಕೊಂಡಿದ್ದಾರೆ, ಪ್ರತಿಭಟನೆ ಎಲ್ಲಿ ನಡೆಯುತ್ತಿದ್ದರೂ ಅವರನ್ನು ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿಯವರ ನೀತಿ ಪ್ರಕಟನಾ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ವೇಳೆ ಪ್ರತಿಭಟನಾಕಾರರನ್ನು ಮೋದಿ ಅಪಹಾಸ್ಯ ಮಾಡಿದ್ದಾರೆ.
ವಕೀಲರಾಗಲಿ, ವಿದ್ಯಾರ್ಥಿಗಳಾಗಲಿ, ಕಾರ್ಮಿಕರಾಗಲಿ ಪ್ರತಿಭಟನೆ ನಡೆಸುವಾಗ ಈ ಜನರು ಇರುತ್ತಾರೆ. ಅವರಿಗೆ ಹೋರಾಟವಿಲ್ಲದೆ ಬದುಕಲು ಸಾಧ್ಯವಿಲ್ಲ. ಅವರನ್ನು ಗುರುತಿಸಬೇಕು. ದೇಶವನ್ನು ಅವರಿಂದ ರಕ್ಷಿಸಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ. ದೇಶ ಪ್ರಗತಿ ಸಾಧಿಸುತ್ತಿದೆ. ನಾವು ಎಫ್‌ಡಿಐ ಬಗ್ಗೆಯೂ ಮಾತನಾಡುತ್ತಿದ್ದೇವೆ. ಆದರೆ ಈಗ ಹೊಸ ಎಫ್‌ಡಿಐ ಬಂದಿದೆ. ಈ ಹೊಸ ಎಫ್‌ಡಿಐಯಿಂದ ನಾವು ದೇಶವನ್ನು ಉಳಿಸಬೇಕಾಗಿದೆ. ನಮಗೆ ಬೇಕಾಗಿರುವುದು ‘ಫೋರಿನ್ ಡಯರೆಕ್ಟ್ ಇನ್ವೆಸ್ಟ್‌ಮೆಂಟ್’. ಆದರೆ ಈ ಹೊಸ ಎಫ್‌ಡಿಐ ‘ಫೋರಿನ್ ಡಿಸ್ಟ್ರಕ್ಟಿವ್ ಐಡಿಯೋಲಜಿ’ (ವಿದೇಶಿ ವಿನಾಶಕಾರಿ ಸಿದ್ಧಾಂತ)ಯಾಗಿದೆ. ಇದರಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.