ಕುಮಾರಸ್ವಾಮಿ ಹೇಳಿಕೆಗೆ ಜೆಡಿಎಸ್ ಮುಸ್ಲಿಮ್ ಮುಖಂಡರಿಂದ ತೀವ್ರ ಅಸಮಾಧಾನ

Prasthutha|

ಮುಸ್ಲಿಮ್ ಸಮಾಜವನ್ನೇ ನಂಬಿಕೊಂಡು ಕುಳಿತಿಲ್ಲ ಎಂದಿದ್ದ ಹೆಚ್​ಡಿಕೆ

- Advertisement -

ರಾಮನಗರ: ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ, ಮುಸ್ಲಿಮ್ ನಾಯಕರು ಪಕ್ಷ ಬಿಟ್ಟರೆ ಬಿಡಲಿ ಎಂಬ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಜೆಡಿಎಸ್ ಮುಸ್ಲಿಮ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಹೇಳಿಕೆಯಿಂದ ಮುಸ್ಲಿಮ್ ಸಮುದಾಯಕ್ಕೆ ಬೇಸರವಾಗಿದೆ. ಇಂತಹ ಹೇಳಿಕೆಯೇ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಕಾರಣವಾಯ್ತು ಎಂದು ಜೆಡಿಎಸ್ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.

- Advertisement -

ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದಾರೆ. ಮೊದಲು ನಿಮ್ಮ ಆರೋಗ್ಯ ಸರಿಯಿಲ್ಲ, ನೋಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಜೆಡಿಎಸ್ ಪಕ್ಷದ ಮುಸ್ಲಿಮ್ ಮುಖಂಡ ಮುಕರ್ರಮ್ ಹೇಳಿದ್ದಾರೆ.

ತಮ್ಮ ಅಕ್ಕಪಕ್ಕದ ಮನೆಯವರಿಗೇ ಕುಮಾರಸ್ವಾಮಿ ಏನೂ ಮಾಡಿಲ್ಲ. ಇನ್ನು ನಮ್ಮ ಸಮುದಾಯಕ್ಕೆ ಏನ್ ಮಾಡ್ತಾರೆ ಎಂದು ಅವರು ಪ್ರಶ್ನೆ ಮಾಡಿದರು. ಚುನಾವಣಾ ಫಲಿತಾಂಶ ಬಂದಿರಲಿಲ್ಲ, 150 ಸ್ಥಾನ ಗೆಲ್ತೀವಿ ಅಂದಿದ್ದೀರಿ. ಬಿಜೆಪಿ ಜೊತೆ ನೀವು ಮೈತ್ರಿ ಮಾಡಿಕೊಂಡಿದ್ದಕ್ಕೆ ನಮಗೆ ಬೇಸರವಿಲ್ಲ. ನಿಮ್ಮ ಮಾತಿನಿಂದ ನಮ್ಮ ಇಡೀ ಸಮುದಾಯಕ್ಕೆ ಬೇಸರವಾಗಿದೆ. ಹೆಚ್​ಡಿಕೆ ಮುಸ್ಲಿಮ್ ಮತಗಳಿಂದಲೇ ಗೆದ್ದು, ಈಗ ವಿರುದ್ಧ ನಿಂತಿದ್ದಾರೆ‌. ಮತ್ತೊಮ್ಮೆ ಮುಸ್ಲಿಮ್ ಸಮುದಾಯದ ಬಗ್ಗೆ ಹೇಳಿಕೆ ನೀಡಿದ್ರೆ ಸುಮ್ಮನಿರಲ್ಲ ಎಂದು ಮುಕರ್ರಮ್ ಎಚ್ಚರಿಕೆ ನೀಡಿದ್ದಾರೆ.



Join Whatsapp