ಭಾರೀ ಹಿಮಪಾತ | ಉತ್ತರಾಖಂಡದಲ್ಲಿ ಉಕ್ಕಿ ಹರಿದ ನದಿಗಳು; 14 ಮಂದಿ ಸಾವು

Prasthutha|

ಚಮೋಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭಾರೀ ಹಿಮ ಕುಸಿತದಿಂದಾಗಿ ಧೌಲಿ ಗಂಗಾ, ರಿಷಿ ಗಂಗಾ ಮತ್ತು ಅಲಕನಂದಾ ನದಿಗಳಲ್ಲಿ ಪ್ರವಾಹ ಉಂಟಾಗಿ ಸಾವನ್ನಪ್ಪಿರುವವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

- Advertisement -

ಧೌಲಿ ಗಂಗಾ, ಋಷಿ ಗಂಗಾ ಮತ್ತು ಅಲಕನಂದಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನೂರಾರು ಐಟಿಬಿಪಿ, ಎನ್ ಡಿಆರ್ ಎಫ್, ಸೇನೆ, ವಾಯು ದಳ ಮತ್ತು ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ನದಿ ತೀರಗಳ ಬಳಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ನಿರ್ಮಾಣ ಹಂತದಲ್ಲಿರುವ ಋಷಿಗಂಗಾ ಜಲವಿದ್ಯುತ್ ಯೋಜನೆ, 530MW ಧೌಲಿಗಂಗಾ ಜಲವಿದ್ಯುತ್ ಯೋಜನೆ ಸೇರಿದಂತೆ ಹಲವು ವಿದ್ಯುತ್ ಯೋಜನೆಗಳಿಗೆ ಪ್ರವಾಹದಿಂದ ಹಾನಿಯಾಗಿವೆ. 

- Advertisement -

ನೀರಿನ ಮಟ್ಟಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಶ್ರೀನಗರ, ಹೃಷಿಕೇಶ, ಜಾಲಿಗ್ರಾಂಟ್ ಮತ್ತು ಡೆಹ್ರಾಡೂನ್ ಗಳಿಗೆ ಎಚ್ಚರಿಕೆ ನೀಡಲಾಗಿದೆ.



Join Whatsapp