ಚಾರ್ಜ್ ಗಿಟ್ಟು ಮೊಬೈಲ್’ನಲ್ಲಿ ಮಾತು: ಮಹಿಳೆ ಸಾವು

Prasthutha|

- Advertisement -

ಚೆನ್ನೈ: ಚಾರ್ಜ್ ಗೆ ಇಟ್ಟು ಮೊಬೈಲ್‍ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡು ಮಹಿಳೆ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ಕೊಕಿಲಾಂಪಾಲ್ (33) ಮೃತ ಮಹಿಳೆ. ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.

- Advertisement -

ಬುಧವಾರ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದಳು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.



Join Whatsapp