ಯೋಧನ ಬೆನ್ನಿನ ಮೇಲೆ PFI ಬರೆದು ಹಲ್ಲೆ ಮಾಡಿದ ಪ್ರಕರಣಕ್ಕೆ ತಿರುವು: ‘ಫೇಮಸ್’ ಆಗಲು ನಕಲಿ ಕಥೆ ಸೃಷ್ಟಿದ ಶೈನ್ ಕುಮಾರ್

Prasthutha|

►ಸೈನಿಕನ ನಕಲಿ ಕಥೆ ತನಿಖೆಯಲ್ಲಿ ಬಹಿರಂಗ

- Advertisement -

ಕೊಲ್ಲಂ: ಕೇರಳದ ಕಡಕ್ಕಲ್ ನಲ್ಲಿ ರಜೆ ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ಸೈನಿಕನ ಮೇಲೆ ಹಲ್ಲೆ ನಡೆಸಿ ಬೆನ್ನಿನ ಮೇಲೆ ‘ಪಿಎಫ್ ಐ’ ಎಂದು ಬರೆಯಲಾದ ಘಟನೆ ತಿರುವು ಪಡೆದುಕೊಂಡಿದ್ದು, ಸ್ವತಃ ಯೋಧನೇ ಕಟ್ಟಿರುವ ಕಥೆ ಇದು ಎಂದು ತನಿಖೆ ವೇಳೆ ಸಾಬೀತಾಗಿದೆ.

ಈ ಬಗ್ಗೆ madhyamam.com ವರದಿ ಮಾಡಿದೆ.

- Advertisement -


ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಚನಪಾರಾ ಮೂಲದ ಶೈನ್ ಕುಮಾರ್ (35) ಮತ್ತು ಆತನ ಸ್ನೇಹಿತ ಜೋಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮಧ್ಯರಾತ್ರಿಯ ಸುಮಾರಿಗೆ, ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ, ಜನರ ಗುಂಪು ದಾರಿಯಲ್ಲಿ ತಡೆದು, ಥಳಿಸಿ, ಅಂಗಿಯನ್ನು ಹರಿದುಹಾಕಿ, ಹಸಿರು ಬಣ್ಣದಲ್ಲಿ ಪಿಎಫ್ಐ ಎಂದು ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದರು.


ಆದಾಗ್ಯೂ, ಇದು ಸೈನಿಕನೇ ಸಿದ್ಧಪಡಿಸಿದ ಕಥೆ ಮತ್ತು ಸ್ನೇಹಿತನೇ ಬೆನ್ನಿನ ಮೇಲೆ ಬರೆದಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.
‘ಪಿಎಫ್ಐ’ ಬರೆಯಲು ಬಳಸಿದ ಬಣ್ಣ ಮತ್ತು ಕುಂಚವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಫೇಮಸ್ ಆಗಬೇಕೆಂಬ ಶೈನ್ ಆಸೆಯೇ ನಕಲಿ ದೂರು ದಾಖಲಿಸಲು ಕಾರಣ ಎಂದು ಅವರ ಸ್ನೇಹಿತ ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಘಟನೆಯನ್ನು ಸಂಘ ಪರಿವಾರದ ಕೇಂದ್ರಗಳು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದವು.



Join Whatsapp