ಸರ್ಕಾರಕ್ಕೆ ಮಹಿಳೆಯರ ಬಗ್ಗೆ ನೈಜ ಕಾಳಜಿ ಇದ್ದರೆ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲಿ: ಶಾಹಿದ ತಸ್ನೀಮ್

Prasthutha|

ಬೆಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಒಬಿಸಿ ಗಳಿಗೆ ಒಳಮೀಸಲಾತಿ ನೀಡಿ ಎಂದು ಎಸ್ ಡಿ ಪಿಐ ರಾಜ್ಯ ಸಮಿತಿ ಸದಸ್ಯೆ ಶಾಹಿದ ತಸ್ನೀಮ್ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ ಎಸ್ ಡಿ ಪಿಐ ರಾಜ್ಯ ಸಮಿತಿ ಸದಸ್ಯೆ ಶಾಹಿದ ತಸ್ನೀಮ್ ಅಭಿಪ್ರಾಯ ವ್ಯಕ್ತಪಡಿಸಿ, “ಸರ್ಕಾರಕ್ಕೆ ಮಹಿಳೆಯರ ಬಗ್ಗೆ ನೈಜ ಕಾಳಜಿ ಇದ್ದರೆ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲಿ, ಅನ್ನದೇ ಸಂಸತ್ತು ಮತ್ತು ವಿಧಾನಸಭೆಗಳು ಮೇಲ್ವರ್ಗದ ಮಹಿಳೆಯರ ಗುತ್ತಿಗೆಯಾಗಿಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.


ಇನ್ನು ಈ ಬಗ್ಗೆ WIM ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆಗ್ರಹಿಸಿದ್ದು, , ಮಹಿಳಾ ಮೀಸಲಾತಿ ಮಾಸೂದೆ ಸಮಾನವಾಗಿ ಹಂಚಿಕೆಯಾಗಬೇಕೆನ್ನುವ ಪ್ರಾಮಾಣಿಕತೆ ಸರಕಾರಕ್ಕೆ ಇದೇ ಎಂದಾದರೆ ಹಿಂದುಳಿದ ವರ್ಗಗಳು ಮತ್ತು ಒಬಿಸಿ ಗಳಿಗೆ ಉಪ ಮೀಸಲಾತಿ ನೀಡಲು ಮುಂದಾಗಲಿ ಎಂದು ಹೇಳಿದ್ದಾರೆ.



Join Whatsapp