ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳು ಕಣ್ಮರೆ: ಅಧೀರ್ ರಂಜನ್ ಚೌಧರಿ

Prasthutha|

ನವದೆಹಲಿ: ಹೊಸ ಸಂಸತ್ ಭವನದ ಉದ್ಘಾಟನಾ ದಿನದಂದು ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿನ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ನಾಪತ್ತೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಆರೋಪಿಸಿದ್ದಾರೆ.

- Advertisement -


‘ನಾವು ಹೊಸ ಸಂಸತ್ ಕಟ್ಟಡಕ್ಕೆ ಕೊಂಡೊಯ್ದ ಸಂವಿಧಾನದ ಪ್ರಸ್ತಾವನೆಯ ಪ್ರತಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎನ್ನುವ ಪದಗಳಿಲ್ಲ. ಅವುಗಳನ್ನು ಜಾಣತನದಿಂದ ತೆಗೆದುಹಾಕಲಾಗಿದೆ. ಇದು ಗಂಭೀರ ವಿಷಯ ಮತ್ತು ನಾವು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಈ ಪದಗಳನ್ನು 1976ರಲ್ಲಿ ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದು ನನಗೆ ತಿಳಿದಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯು ಮೂಲ ಆವೃತ್ತಿಯನ್ನು ಹೊಂದಿದ್ದು, ಸಂವಿಧಾನಾತ್ಮಕ ತಿದ್ದುಪಡಿಗಳ ನಂತರ ಈ ಉಲ್ಲೇಖಿತ ನಿರ್ದಿಷ್ಟ ಪದಗಳನ್ನು ಸೇರಿಸಲಾಯಿತು. ಮೂಲಭೂತವಾಗಿ, ತಿದ್ದುಪಡಿ ಪ್ರಕ್ರಿಯೆಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾದ ಹೆಚ್ಚುವರಿ ಪದಗಳನ್ನು ಈ ಪ್ರತಿಗಳು ಒಳಗೊಂಡಿಲ್ಲ ಎಂದು ಹೇಳಿದರು.



Join Whatsapp