ಕೋಲ್ಕತ್ತಾ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಅವರು ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಕೋಲ್ಕತ್ತಾದ ಕೆಳ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಮೊಹಮ್ಮದ್ ಶಮಿ, ಅವರ ಸಹೋದರ ಮೊಹಮ್ಮದ್ ಹಾಸಿಮ್ ಹಾಗೂ ಕುಟುಂದ ಇತರ ಸದಸ್ಯರಿಗೆ ಮಂಗಳವಾರ ಕೋಲ್ಕತ್ತಾದ ಎಸಿಜೆಎಂ ನ್ಯಾಯಾಲಯ 2000 ರೂಪಾಯಿಯ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ.
ಮಾರ್ಚ್ 2018 ರಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯ ವಿಚ್ಛೇದಿತ ಪತ್ನಿಯಿಂದ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಶಮಿಯ ‘ವಿವಾಹಯೇತರ’ ಸಂಬಂಧಗಳ ವಿರುದ್ಧ ಪ್ರತಿಭಟಿಸಿದ ನಂತರ ಶಮಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಹಸೀನ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಭಾರತೀಯ ದಂಡ ಸಂಹಿತೆಯ 498A, 323, 307, 376, 506, 328 ಮತ್ತು 34 ಸೆಕ್ಷನ್ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ, ಶಮಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು.