ಸತ್ಯ ಹೇಳುವವರನ್ನು ಸರಕಾರ ದೇಶದ್ರೋಹಿಗಳಂತೆ ಚಿತ್ರಿಸುತ್ತಿದೆ: ಶಿವಸೇನೆ ಸಂಸದ

Prasthutha|

- Advertisement -

ಹೊಸದಿಲ್ಲಿ : ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿ ಸರಕಾರ ಸತ್ಯ ಮಾತನಾಡುವವರನ್ನು ದೇಶದ್ರೋಹಿಗಳು ಅಥವಾ ರಾಷ್ಟ್ರ ವಿರೋಧಿಗಳಾಗಿ ಚಿತ್ರೀಕರಿಸುತ್ತಿದೆ ಎಂದು ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಸರಕಾರವನ್ನು ಟೀಕಿಸಲು ಧೈರ್ಯ ಮಾಡುವವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದರಿಂದ ಅವರನ್ನು ರಾಷ್ಟ್ರ ವಿರೋಧಿ ಮತ್ತು ಖಲಿಸ್ತಾನಿಗಳೆಂದು ಚಿತ್ರೀಕರಿಸಲಾಗುತ್ತಿದೆ ಎಂದು ಶಿವಸೇನೆಯ ಮುಖಂಡ ರಾವತ್ ಹೇಳಿದ್ದಾರೆ.

“ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸತ್ಯಕ್ಕೆ ಕಿವಿಕೊಡುವಂತೆ ಕೇಳಿಕೊಂಡಿದ್ದಾರೆ, ನಾವು ಕಳೆದ ಆರು ವರ್ಷಗಳಿಂದ ನಿಮ್ಮ ಸತ್ಯವನ್ನು ಕೇಳುತ್ತಾ ಇದ್ದೇವೆ. ಸುಳ್ಳನ್ನು ಕೂಡ ಸತ್ಯವೆಂದು ವಾದಿಸಲಾಗುತ್ತಿದೆ. ಸತ್ಯವನ್ನು ಬರೆಯುವವರನ್ನು ದೇಶದ್ರೋಹಿ ಮತ್ತು ರಾಷ್ಟ್ರ ವಿರೋಧಿ ಎಂದು ಮುದ್ರೆ ಹಾಕಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಸಂಸದರಾದ ಸಂಜಯ್ ಸಿಂಗ್, ಶಶಿ ತರೂರ್, ಪತ್ರಕರ್ತರು ಮತ್ತು ಬರಹಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದಾರೆ.



Join Whatsapp