ಪ್ರತಿಭಾ ಕಾರಂಜಿ: ಇಳಂತಿಲ ಜ್ಞಾನಭಾರತಿ ಶಾಲೆಗೆ ಹಲವು ಪ್ರಶಸ್ತಿ

Prasthutha|

ಉಪ್ಪಿನಂಗಡಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಕರಾಯ ಹಾಗೂ ಸ.ಉ.ಹಿ.ಪ್ರಾ. ಶಾಲೆ ಇಳಂತಿಲ ಇವುಗಳ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕರಾಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉಪ್ಪಿನಂಗಡಿ ಇಳಂತಿಲ ಜ್ಞಾನಭಾರತಿ ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

- Advertisement -

ಶಾಲೆಯು ಹಿರಿಯರ ವಿಭಾಗದ ವಿದ್ಯಾರ್ಥಿಗಳು 34 ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಗಳಲ್ಲಿ ಭಾಗವಹಿಸಿದ ಜ್ಞಾನಭಾರತಿ ಶಾಲಾ ತಂಡ ಹಿರಿಯರ ವಿಭಾಗದ ಅರೇಬಿಕ್ ಧಾರ್ಮಿಕ ಪಠಣ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ಶನುಂ ಪ್ರಥಮ, ಕನ್ನಡ ಕಂಠಪಾಠದಲ್ಲಿ ಅನೀಶಾ ಪ್ರಥಮ, ಲಘು ಸಂಗೀತದಲ್ಲಿ ಮರ್ಝೀಯಾ ದ್ವಿತೀಯ, ಕ್ಲೇ ಮಾಡೆಲಿಂಗ್ ನಲ್ಲಿ ಅಯಾನ್ ದ್ವಿತೀಯ, ಚಿತ್ರಕಲೆಯಲ್ಲಿ ಸಬರುಸ್ತ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕಿರಿಯರ ವಿಭಾಗದಲ್ಲಿ ಆಶುಭಾಷಣದಲ್ಲಿ ಮುಹಮ್ಮದ್ ಅಮೀನ್ ಪ್ರಥಮ, ಅಭಿನಯ ಗೀತೆಯಲ್ಲಿ ರೈಫಾ ದ್ವಿತೀಯ, ಚಿತ್ರಕಲೆಯಲ್ಲಿ ಮುಂಝೀರ್ ದ್ವಿತೀಯ, ಲಘು ಸಂಗೀತದಲ್ಲಿ ಅಯಾನ್ ತೃತೀಯ, ಇಂಗ್ಲೀಷ್ ಕಂಠಪಾಠದಲ್ಲಿ ರುಫೈದಾ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.



Join Whatsapp