ಖ್ಯಾತ ತಮಿಳು ನಟ ಜಿ.ಮಾರಿಮುತ್ತು ಹೃದಯಾಘಾತದಿಂದ ನಿಧನ

Prasthutha|

ತಮಿಳು ನಟ, ನಿರ್ದೇಶಕ ಮಾರಿಮುತ್ತು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದ ಮಾರಿಮುತ್ತು ವಿಧಿವಶರಾಗಿದ್ದಾರೆ.

- Advertisement -


ಸಿನಿಮಾವೊಂದರ ಡಬ್ಬಿಂಗ್ ಮಾಡುವಾಗ ಇಂದು ಬೆಳಿಗ್ಗೆ 8:30ಕ್ಕೆ ಹೃದಯಾಘಾತ ಸಂಭವಿಸಿದೆ. ಸ್ಥಳದಲ್ಲಿಯೇ ನಟ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
56 ವರ್ಷದ ಹಿರಿಯ ನಟ ಮಾರಿಮುತ್ತು ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.ಮಾರಿಮುತ್ತು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರು ಸಾಕಷ್ಟು ಸೀರಿಯಲ್, ಮತ್ತು ಸಿನಿಮಾಗಳಲ್ಲಿ ಮಾರಿಮುತ್ತು ನಟಿಸಿದ್ದರು. ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.



Join Whatsapp