ನಾಗರಿಕ ಸ್ವಾತಂತ್ರ್ಯಗಳ ದಮನ | ವಿಶ್ವ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ ಭಾರೀ ಕುಸಿತ

Prasthutha|

ಹೊಸದಿಲ್ಲಿ : ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ ಭಾರೀ ಕುಸಿತವುಂಟಾಗಿ 53 ನೇ ಸ್ಥಾನಕ್ಕೆ ತಲುಪಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿ ಮಾಡಿದೆ.

- Advertisement -

“ಪ್ರಜಾಪ್ರಭುತ್ವ ವಿರೋಧಿ ನೀತಿಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿರುದ್ಧದ ದಬ್ಬಾಳಿಕೆಯು 167 ದೇಶಗಳ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಭಾರತವನ್ನು ಹಿಂದಕ್ಕೆ ತಳ್ಳಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸ್ಥಾನವು ಪ್ರತಿವರ್ಷ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಕ್ಷೀಣಿಸುತ್ತಿದೆ” ಎಂದು EIU ವರದಿಯಲ್ಲಿ ತಿಳಿಸಿದೆ.

2019 ರಲ್ಲಿ ಭಾರತದ ಒಟ್ಟಾರೆ 6.61 ಆಗಿದ್ದ ಅಂಕ 6.9 ಗೆ ಇಳಿದಿದೆ. 2014 ರಲ್ಲಿ 7.92 ರಷ್ಟಿದ್ದ ಅಂಕ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕುಸಿಯಲಾರಂಭಿಸಿದೆ. ಜಾಗತಿಕವಾಗಿ 2014 ರಲ್ಲಿ 27 ನೇ ಸ್ಥಾನದಲ್ಲಿದ್ದ ಭಾರತ ಈಗ 53 ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವದ 167 ದೇಶಗಳಲ್ಲಿ 23 ದೇಶಗಳನ್ನು ಪೂರ್ಣ ಪ್ರಜಾಪ್ರಭುತ್ವಗಳಾಗಿ, 52 ಕೆಟ್ಟ ಪ್ರಜಾಪ್ರಭುತ್ವಗಳಾಗಿ, 35 ಹೈಬ್ರಿಡ್ ಪ್ರಭುತ್ವಗಳಾಗಿ ಮತ್ತು 57 ಸರ್ವಾಧಿಕಾರಿ ಆಡಳಿತಗಳಾಗಿಯೂ ವರದಿಯು ವರ್ಗೀಕರಿಸಿದ್ದು, ಭಾರತವನ್ನು ‘ ಕೆಟ್ಟ ಪ್ರಜಾಪ್ರಭುತ್ವ’ ವಿಭಾಗದಲ್ಲಿ ಸೇರಿಸಲಾಗಿದೆ.
ಭಾರತ ಮತ್ತು ಥೈಲ್ಯಾಂಡ್‌ನಲ್ಲಿ, “ಆಡಳಿತ ವರ್ಗಗಳ ಪ್ರಜಾಪ್ರಭುತ್ವದ ಹಿಮ್ಮೆಟ್ಟುವಿಕೆ ಮತ್ತು ನಾಗರಿಕ ಸ್ವಾತಂತ್ರ್ಯಗಳ ದಬ್ಬಾಳಿಕೆಯು ಜಾಗತಿಕ ಶ್ರೇಯಾಂಕದಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗಿದೆ” ಎಂದು ವರದಿ ಹೇಳುತ್ತದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ‘ಭಾರತೀಯ ಪೌರತ್ವ’ಕ್ಕೆ ಧಾರ್ಮಿಕ ಅಂಶವನ್ನು ಸೇರಿಸುತ್ತಿದೆ. ಇದು ಭಾರತೀಯ ಸಂವಿಧಾನದ ಜಾತ್ಯತೀತ ನೆಲೆಯನ್ನು ಹಾಳು ಮಾಡುತ್ತದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿಯು ಹೇಳುತ್ತಿದೆ. ಆರ್ಥಿಕ, ವಾಣಿಜ್ಯ ಸಂಶೋಧನೆ, ಮುನ್ಸೂಚನೆ ಮತ್ತು ವಿಶ್ಲೇಷಣೆಗಾಗಿ ವಿಶ್ವದ ಪ್ರಮುಖ ಸಂಸ್ಥೆಯಾಗಿದೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್.

Join Whatsapp