ಜಿ20 ಶೃಂಗಸಭೆ: ಜೋ ಬೈಡೆನ್ ವಾಸ್ತವ್ಯಕ್ಕೆ ಬುಕ್ ಆಗಿರುವ ಹೋಟೆಲ್ ಕೋಣೆಯ ಬಾಡಿಗೆ ದಿನಕ್ಕೆ ರೂ. 8 ಲಕ್ಷ!

Prasthutha|

ಹೊಸದಿಲ್ಲಿ: ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಲಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ ವಾಸ್ತವ್ಯಕ್ಕೆ ಬುಕ್ ಆಗಿರುವ ಹೋಟೆಲ್ ಕೋಣೆಯ ಬಾಡಿಗೆ ಎಷ್ಟೆಂದು ಕೇಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ.

- Advertisement -

ಬೈಡನ್ ಅವರು ಉಳಿದುಕೊಳ್ಳಲಿರುವ ಸೂಟ್ ಹೋಟೆಲ್ ರೂಮಿನ ಬಾಡಿಗೆ ದಿನವೊಂದಕ್ಕೆ 8 ಲಕ್ಷ ರೂ. ಎನ್ನಲಾಗುತ್ತಿದೆ.

ಯುಎಸ್ ಅಧ್ಯಕ್ಷರು ಭಾರತ ಪ್ರವಾಸ ಬಂದಾಗ ಅವರನ್ನು ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಇರಿಸುವುದು ವಾಡಿಕೆ. ಬೈಡನ್ ಮತ್ತು ಅವರ ಸಿಬ್ಬಂದಿಗಾಗಿ ಅದೇ ಹೊಟೆಲ್ ನಲ್ಲಿ ಸುಮಾರು 400 ರೂಮುಗಳನ್ನು ಬುಕ್ ಮಾಡಲಾಗಿದೆ. ಬೈಡನ್ ಅವರು ಉಳಿದುಕೊಳ್ಳುವ ಸೂಟ್ 4,600 ಚದರ ಅಡಿಗಳಷ್ಟು ವಿಸ್ತಾರವಾಗಿದೆ ಮತ್ತು ದಿನವೊಂದಕ್ಕೆ ಇದರ ಬಾಡಿಗೆ ರೂ. 8 ಲಕ್ಷ.

- Advertisement -

ಜಿ20 ಶೃಂಗಸಭೆಗೆ ರಾಷ್ಟ್ರದ ರಾಜಧಾನಿ ಸರ್ವಾಲಂಕಾರಗೊಳ್ಳುತ್ತಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಸೆಪ್ಟೆಂಬರ್ 8 ರಿಂದ 10 ರವರೆಗೆ ನಡೆಯಲಿರುವ ಸಮಾವೇಶದಲ್ಲಿ ವಿಶ್ವದ ಪ್ರಮುಖ ಗಣ್ಯರು ಭಾಗವಹಿಸುತ್ತಿದ್ದಾರೆ. ಅವರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನ ಮಂತ್ರಿ ರಿಷಿ ಸುನಾಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರನ್ ಮೊದಲಾದವರು ಸೇರಿದ್ದಾರೆ. ವಿದೇಶೀ ಗಣ್ಯರ ವಾಸ್ತವ್ಯಕ್ಕಾಗಿ ದೆಹಲಿಯ 30 ಅತ್ಯುನ್ನತ ಶ್ರೇಣಿಯ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ.

ಬ್ರಿಟಿಷ್ ಪ್ರಧಾನಿ ಸುನಾಕ್, ಶ್ಯಾಂಗ್ರಿಲಾ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ, ಮ್ಯಾಕ್ರನ್ ಗೆ ದಿ ಕ್ಲ್ಯಾರಿಜ್ ಹೋಟೆಲ್ ಬುಕ್ ಮಾಡಲಾಗಿದೆ.



Join Whatsapp