ರಾಜಕೀಯ ಲಾಭಕ್ಕೆ ಮಾಡುವ ಉಚಿತ ಯೋಜನೆಗಳ ಆಯಸ್ಸು ಸ್ವಲ್ಪ ದಿನ: ಬೊಮ್ಮಾಯಿ

Prasthutha|

ಬೆಂಗಳೂರು: ಉಚಿತ ಯೋಜನೆಗಳು ರಾಜಕೀಯ ಲಾಭಕ್ಕೆ ಮಾಡೋ ಯೋಜನೆಗಳು. ಈ ಯೋಜನೆಯ ಆಯಸ್ಸು ಸ್ವಲ್ಪ ದಿನ ಮಾತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕರ ಆದಾಯ ಹೆಚ್ಚಾಗಬೇಕು. ಉದ್ಯೋಗ ಸಿಗಬೇಕು. ಆರ್ಥಿಕತೆ ಹೆಚ್ಚಾಗಬೇಕು, ಕೊಳ್ಳುವ ಪವರ್ ಹೆಚ್ಚಾಗಬೇಕು. ಆಗ ದೇಶ ಅಭಿವೃದ್ಧಿ ಆಗುತ್ತದೆ ಎಂದು ಮೋದಿ ಹೇಳಿದ್ದಾರೆ. ಉಚಿತ ಯೋಜನೆಗಳು ಅಲ್ಪ ಕಾಲದ ಯೋಜನೆಗಳು. ಇವು ಸ್ವಲ್ಪ ದಿನ ಆದ ಮೇಲೆ ಲಾಭ ಕೊಡುವುದಿಲ್ಲ. ಇದನ್ನು ರಾಜಕೀಯ ಲಾಭಕ್ಕೆ ಮಾಡುತ್ತಾರೆ. ಇದನ್ನೇ ಮೋದಿ ಅವರು ಹೇಳಿದ್ದಾರೆ ಎಂದರು.



Join Whatsapp