ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು: ಡಿಸಿಎಂ ಡಿಕೆಶಿ

Prasthutha|

ಬೆಂಗಳೂರು: ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

- Advertisement -


ಈ ಬಗ್ಗೆ ಮಾತನಾಡಿದ ಅವರು, ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸ್ತಿವೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ವು? ಆಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಅಂತ ಕೇಂದ್ರಕ್ಕೆ ಕೇಳಲಿಲ್ಲ? ಬಿಜೆಪಿ, ಜೆಡಿಎಸ್ ಪಕ್ಷದವರೂ ಕೇಂದ್ರಕ್ಕೆ ಮೇಕೆದಾಟು ಯೋಜನೆಯ ಅನುಮತಿಗೆ ಯಾಕೆ ಕೇಳ್ತಿಲ್ಲ? ಹೋರಾಟಗಾರರು ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಕೇಳಲಿ. ನಾವು ನಮ್ಮ ರೈತರ ಹಿತ ಕಾಪಾಡಲು ಬದ್ಧವಾಗಿದ್ದೀವೆ” ಎಂದರು.


ತಮಿಳುನಾಡು ಸರ್ಕಾರ 24 ಸಾವಿರ ಕ್ಯೂಸೆಕ್ಸ್ ನೀರಿಗೆ ಆಗ್ರಹಿಸಿತ್ತು. 3 ಸಾವಿರ ಕ್ಯೂಸೆಕ್ ಮಾತ್ರ ಬಿಡಲು ಸಾಧ್ಯ ಎಂದು ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಾಡಿದರ ಪರಿಣಾಮ, ಈಗ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ಅದೇಶಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಾಡ್ತಿದ್ದಾರೆ. ನಾನೂ ಕೂಡಾ ದೆಹಲಿಗೆ ಹೋಗಿ ವಕೀಲರ ಜೊತೆ ಮಾತಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡುತ್ತೇವೆ ಎಂದು ತಿಳಿಸಿದರು



Join Whatsapp