ಆಸ್ಪತ್ರೆಯಿಂದ ಕುಮಾರಸ್ವಾಮಿ ಡಿಸ್ಚಾರ್ಜ್: ಪುನರ್ಜನ್ಮ ಸಿಕ್ಕಿದೆ, ಪಾರ್ಶ್ವವಾಯು ಬಗ್ಗೆ ನಿರ್ಲಕ್ಷ್ಯ ಮಾಡ್ಬೇಡಿ ಎಂದ ಮಾಜಿ ಸಿಎಂ

Prasthutha|

- Advertisement -

ಬೆಂಗಳೂರು: ಅನಾರೋಗ್ಯದಿಂದ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯ ವೈದ್ಯರು ಕುಮಾರಸ್ವಾಮಿ ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ತಮ್ಮ ಆರೋಗ್ಯದ ಬಗ್ಗೆ ವಿವರಿಸಿದ್ದಾರೆ.

- Advertisement -

ಭಗವಂತನ ದಯೆ ಹಾಗೂ ತಂದೆ, ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ಕಳೆದ 5 ದಿನಗಳಿಂದ ಸ್ನೇಹಿತರಲ್ಲಿ ಭಯದ ವಾತಾವರಣ ಇತ್ತು. ನಿಖರವಾದ ಆರೋಗ್ಯದ ಮಾಹಿತಿಯನ್ನೂ ನೀವು ಕೊಟ್ಟಿದ್ದೀರಿ. ತಂದೆ-ತಾಯಿ‌ ಆಶೀರ್ವಾದದಿಂದ ಪುನರ್​ಜನ್ಮ ಸಿಕ್ಕಿದೆ ಎಂದು ಅಪೋಲೋ‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.

ಪಾರ್ಶ್ವವಾಯು ಆದಾಗ ಯಾವಾಗ ರೀತಿ ಸ್ಪಂದಿಸಬೇಕು ಎಂದು ಈಗಷ್ಟೇ ವೈದ್ಯರು ಹೇಳಿದ್ದಾರೆ. ಇದನ್ನ ನಿರ್ಲಕ್ಷ್ಯ ಮಾಡಬೇಡಿ. ಇದು ಗೋಲ್ಡನ್ ಟೈಂ. ಜೀವನ ಪರ್ಯಂತ ಕಾಡುವಂತೆ ಮಾಡಿಕೊಳ್ಳುವುದು ಬೇಡ. ಇದು ಮೂರನೇ ಜನ್ಮವನ್ನ ನನಗೆ ಭಗವಂತ ಕೊಟ್ಟಿದ್ದಾನೆ. 64 ವರ್ಷದಲ್ಲಿ ಮೂರು ಬಾರಿ ಮರುಜನ್ಮ ಪಡೆದಿದ್ದೇನೆ. ವೈದ್ಯಕೀಯ ಹಾಗೂ ಭಗವಂತನ ದಯೆಯಿಂದ ಇಳಿದಿದ್ದೇನೆ. ನಾನು ನಿರ್ಲಕ್ಷ್ಯ ಮಾಡಿದಿದ್ದರೆ ನಿಮ್ಮೊಂದಿಗೆ ಈಗ ಸಹಜವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.



Join Whatsapp