ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಪತನ: ರೇಣುಕಾಚಾರ್ಯ

Prasthutha|

►ನಮ್ಮವರಿಗೆ ದುರಂಕಾರ, ಸರ್ವಾಧಿಕಾರಿ ಧೋರಣೆ ತೋರ್ತಾರೆ ಎಂದ ಮಾಜಿ ಸಚಿ

- Advertisement -

ದಾವಣಗೆರೆ: ಶೀಘ್ರದಲ್ಲೇ ರಾಜ್ಯ ಬಿಜೆಪಿ ಪತನವಾಗಲಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ. ರಾಜ್ಯ ಬಿಜೆಪಿ ಮುಖ್ಯವಾಗಲಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು.

- Advertisement -

‘ಭೂತ ಮಟ್ಟದ ಸಮಸ್ಯೆಗಳನ್ನು ಕೇಳಬೇಕು. ಅಧಿಕಾರ ಇದ್ದಾಗಲೇ ಕಾರ್ಯಕರ್ತರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ರಾಜಕಾರಿಣಿಗಳು ಜನರ ಮಧ್ಯೆ ಇರಬೇಕು, ಅವರ ಅಹವಾಲುಗಳನ್ನು ಕೇಳಬೇಕು. ಕೇವಲ ಕಾರ್ಯಕರ್ತರನ್ನು ಚುನಾವಣೆ ಬಂದಾಗ ಬಾವುಟ ಹಿಡಿದುಕೊಳ್ಳಲು ಅಷ್ಟೇ ನಾ ಬಳಸಿಕೊಳ್ಳುವುದು ಎಂದು ಸ್ವ ಪಕ್ಷದ ವಿರುದ್ದವೇ ಕಿಡಿಕಾರಿದ್ದಾರೆ.

ಇನ್ನು ಇದೇ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಜನರಿಗೆ ಅನುಕೂಲಕರವಾಗಲಿದೆ. ಆದ್ರೆ, ನಮ್ಮವರು ತಡ ಮಾಡಿದ್ರು. ಕಾಂಗ್ರೆಸ್ ನಾಯಕರು ಕೊಟ್ಟ ಭರವಸೆಗಳು ಭರವಸೆಯಾಗಿಯೇ ಉಳಿಯಬಾರದು.. ಎಲ್ಲರಿಗೂ ಆದಷ್ಟು ಬೇಗ ಜಾರಿ ಮಾಡ್ಬೇಕು ಎಂದರು.



Join Whatsapp