ನವದೆಹಲಿ: ಹಿರಿಯ ಸಾಹಿತಿ ದೇವ್ ಕೊಹ್ಲಿ ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು.
ಮುಂಬೈನ ಲೋಖಂಡವಾಲಾ ಕಾಂಪ್ಲೆಕ್ಸ್ ನಲ್ಲಿರುವ ಜುಪಿಟರ್ ಅಪಾರ್ಟ್ ಮೆಂಟ್ ನ 4ನೇ ಕ್ರಾಸ್ ನಲ್ಲಿರುವ ದೇವ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ಸಾಹಿತಿ ದೇವ್ ಕೊಹ್ಲಿ ಅವರು 100 ಕ್ಕೂ ಅಧಿಕ ಸೂಪರ್ ಹಿಟ್ ಸಿನಿಮಾಗಳಿಗೆ ಹಾಡನ್ನು ಬರೆದಿದ್ದಾರೆ. ಮೈನೆ ಪ್ಯಾರ್ ಕಿಯಾ, ಬಾಜಿಗರ್, ಜುಡ್ವಾ 2, ಮುಸಾಫಿರ್, ಶೂಟ್ ಔಟ್ ಅಲ್ ಲೋಖಂಡವಾಲಾ, ಟ್ಯಾಕ್ಸಿ ನಂಬರ್ 9-2-11ನಂತಹ ಅದ್ಭುತ ಚಿತ್ರಗಳ ಹಾಡಿಗೆ ಇವರು ಸಾಹಿತ್ಯ ಬರೆದಿದ್ದಾರೆ. ಅನು ಮಲಿಕ್, ರಾಮ್ ಲಕ್ಷ್ಮಣ್, ಆನಂದ್ ರಾಜ್ ಆನಂದ್, ಆನಂದ್ ಮಿಲಿಂದ್ ಸೇರಿದಂತೆ ಇನ್ನೂ ಅನೇಕ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ್ದಾರೆ.