ಪುತ್ತೂರು| ಯುವತಿಗೆ ಚಾಕು ಇರಿತ: ಸ್ಥಿತಿ ಗಂಭೀರ

Prasthutha|

ಪುತ್ತೂರು: ಯುವತಿಗೆ ಮೇಲೆ ಚಾಕು ಇರಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ನಡೆದಿದೆ.

- Advertisement -


ವಿಟ್ಲ ಸಮೀಪದ ಅಳಿಕೆಯ ಗೌರಿ (25) ಗಾಯಾಳು ಎನ್ನಲಾಗುತ್ತಿದೆ.


ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -


ಸರ್ಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ಸರಪಾಡಿ ಮೂಲದ ಯುವಕ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಬೈಕ್ ನಲ್ಲಿ ಬಂದಿದ್ದ ಯುವಕ, ಯುವತಿಯನ್ನು ತಡೆದು ಚೂರಿಯಲ್ಲಿ ಇರಿದಿದ್ದಾನೆ. ಆನಂತರ ತಪ್ಪಿಸಿಕೊಂಡಿದ್ದಾನೆ. ಸ್ಥಳದಲ್ಲಿರುವ ಸಿಸಿಟಿವಿ ಆಧರಿಸಿ ಪುತ್ತೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Join Whatsapp