ಒಂದೇ ರನ್ ವೇಯಲ್ಲಿ ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್​ ಪ್ರಕ್ರಿಯೆ: ತಪ್ಪಿದ ಭಾರೀ ಅನಾಹುತ

Prasthutha|

ಹೊಸದಿಲ್ಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಭಾರೀ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು. ಅಹಮದಾಬಾದ್-ದಿಲ್ಲಿ ವಿಮಾನದ ಪೈಲಟ್ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ.

- Advertisement -


ಇಂದು (ಆ.23) ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್ ಲೈನ್ಸ್ ವಿಮಾನವೊಂದಕ್ಕೆ ಲ್ಯಾಂಡಿಂಗ್ ಗೆ ಅನುಮತಿ ನೀಡಲಾಗಿತ್ತು. ಆದರೆ ಇದೇ ಸಮಯದಲ್ಲಿ ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟ ಮತ್ತೊಂದು ವಿಮಾನ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು. ಈ ವಿಚಾರ ತಿಳಿದು ತಕ್ಷಣ ATC (Air Traffic Control) ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟ ವಿಮಾನಕ್ಕೆ ಟೇಕ್-ಆಫ್ ಮಾಡದಂತೆ ಸೂಚನೆ ನೀಡಿ, ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.


ದೆಹಲಿ-ಬಾಗ್ಡೋಗ್ರಾ ವಿಮಾನವು ಇತ್ತೀಚೆಗೆ ಉದ್ಘಾಟನೆಗೊಂಡ ರನ್ವೇಯಲ್ಲಿ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್ ನಿಂದ ಬರುತ್ತಿದ್ದ ವಿಸ್ತಾರಾ ವಿಮಾನವು ಇದೇ ರನ್ವೇಯಲ್ಲಿ ಬಂದು ಇಳಿದಿದೆ. ತಕ್ಷಣ ರನ್ವೇಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಟೇಕ್ ಆಫ್ ಆಗುತ್ತಿದ್ದ ವಿಮಾನಕ್ಕೆ ವಾಯು ಸಂಚಾರ ನಿಯಂತ್ರಣಾಲಯ (ATC) ಸೂಚನೆ ನೀಡಿದೆ.

- Advertisement -

ವಿಮಾನಗಳು 1.8 ಕಿಮೀ ಅಥವಾ 1,800 ಮೀಟರ್ ದೂರದಲ್ಲಿದ್ದವು ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್- ದಿಲ್ಲಿ ವಿಮಾನದ 45 ವರ್ಷದ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯ ಪ್ರಜ್ಞೆಯಂದ ದುರಂತ ತಪ್ಪಿತು ಎಂದು ತಿಳಿದು ಬಂದಿದೆ.



Join Whatsapp