ವಲಸಿಗರಿದ್ದ ಹಡಗು ಮುಳುಗಿ 63 ಮಂದಿ ಮೃತ್ಯು

Prasthutha|

ಕೇಪ್ ವರ್ಡೆ: ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ಕರಾವಳಿ ಬಳಿ ವಲಸಿಗರಿದ್ದ ಹಡಗು ಮುಳುಗಿ 63 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕೇಪ್ ವರ್ಡೆ ದ್ವೀಪಗಳಿಂದ ಸುಮಾರು 150 ನಾಟಿಕಲ್ ಮೈಲಿ (277 ಕಿಲೋಮೀಟರ್) ದೂರದಲ್ಲಿರುವ ಅಟ್ಲಾಂಟಿಕ್ ಸಾಗರದಲ್ಲಿ ಮೀನುಗಾರಿಕಾ ದೋಣಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಪಶ್ಚಿಮ ಆಫ್ರಿಕಾದ ಕೇಪ್ ವರ್ಡೆ ಕರಾವಳಿಯಲ್ಲಿ ಸೆನೆಗಲ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಐಒಎಂ ವಕ್ತಾರ ಸಫಾ ಮಸೆಹ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಪಘಾತದಲ್ಲಿ 63 ಜನರು ಸಾವನ್ನಪ್ಪಿದ್ದಾರೆ, 38 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ.



Join Whatsapp