ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಉಜ್ಜಿ ದೌರ್ಜನ್ಯ

Prasthutha|

ಲಕ್ನೋ: ಇಬ್ಬರು ಅಪ್ರಾಪ್ತ ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

- Advertisement -

ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಭಯಾನಕ ದೃಶ್ಯದ ವೀಡಿಯೋಗಳು ವೈರಲ್‌ ಆಗಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದರು.

ಇಬ್ಬರು ಮಕ್ಕಳ ಕುರಿತಾದ ಆಕ್ಷೇಪಾರ್ಹ ಕೃತ್ಯದ ವೀಡಿಯೋಗಳನ್ನು ಗಮನಿಸಿದ್ದೇವೆ. ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹಲ್ಲೆ ನಡೆಸಿದವರನ್ನು ಗುರುತಿಸಿ, ಈಗಾಗಲೇ 6 ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp