ವಿಮಾನದಲ್ಲಿ ಸುಟ್ಟ ವಾಸನೆ, ಕೊಚ್ಚಿ ನಿಲ್ದಾಣಕ್ಕೆ ಹಿಂದಿರುಗಿದ ವಿಮಾನ

Prasthutha|

ನವದೆಹಲಿ: ಕೊಚ್ಚಿಯಿಂದ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕೊಚ್ಚಿಗೆ ವಾಪಸಾಗಿದೆ. ವಿಮಾನದಲ್ಲಿ ಸುಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿಮಾನವನ್ನು ತಕ್ಷಣವೇ ಕೊಚ್ಚಿಗೆ ಹಿಂದಿರುಗಿಸಲಾಯಿತು. ಆಗಸ್ಟ್ 2 ರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ವಿಮಾನಯಾನ ಮೂಲಗಳು ಗುರುವಾರ ತಿಳಿಸಿವೆ.

- Advertisement -


ಮೂಲಗಳ ಪ್ರಕಾರ, ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆದ ಕೂಡಲೇ ವಿಮಾನ ಪ್ರಯಾಣಿಕರೊಬ್ಬರಿಗೆ ಸುಟ್ಟ ವಾಸನೆ ಬಂದಿತ್ತು, ಅವರು ತಕ್ಷಣವೇ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.


ಬುಧವಾರ ತಡರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ವಿಮಾನವನ್ನು ತಪಾಸಣೆ ನಡೆಸಲಾಗಿದ್ದು, ಯಾವುದೇ ದೋಷ ಕಂಡುಬಂದಿಲ್ಲ ಎಂದು ವಿಮಾನಯಾನ ಹೇಳಿದೆ.



Join Whatsapp