ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿಯಮ ಉಲ್ಲಂಘಿಸಿ ಸಂಚಾರ

Prasthutha|

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ AI ಕ್ಯಾಮೆರಾ ಅಳವಡಿಸುವ ಮೂಲಕ ಮಿತಿಗಿಂತ ಅತಿಯಾಗಿ ವೇಗದಲ್ಲಿ ವಾಹನ ಚಲಾಯಿಸಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇಂದಿನಿಂದ ಬೈಕ್​, ಆಟೋ, ತ್ರಿಚಕ್ರ ವಾಹನ, ಟ್ಯಾಕ್ಟರ್​ ಮತ್ತು ಮೋಟಾರ್​ ರಹಿತ ವಾಹನಗಳನ್ನು ನಿಷೇಧಿಸಲಾಗಿದೆ. ಆದರೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಜನರು ಎಕ್ಸಪ್ರೆಸ್​ವೇ ನಲ್ಲಿ ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

- Advertisement -

ಬೆಂಗಳೂರು ವೋಸ್ ಎಂಬ ಟ್ವಿಟರ್​ ಬಳಕೆದಾರರು ವಿಡಿಯೋವೊಂದನ್ನು ಟ್ವಿಟ್​ ಮಾಡಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೂಬಿನಕೆರೆ ಬಳಿ “ವಯಸ್ಸಾದ ವ್ಯಕ್ತಿಯೊಬ್ಬರು ದನಗಳೊಂದಿಗೆ ಎಕ್ಸ್‌ಪ್ರೆಸ್‌ವೇ ದಾಟುತ್ತಿರುವುದನ್ನು” ಕಾಣಬಹುದಾಗಿದೆ. ಒಂದು ವೇಳೆ ವೇಗವಾಗಿ ವಾಹನ ಬಂದು ಗುದ್ದಿದರೆ ಯಾರು ಹೊಣೆ? ನಿಯಮ ಬಾಹಿರವಾಗಿ ಏಕೆ ಹೆದ್ದಾರಿ ಮೇಲೆ ಸಂಚರಿಸುತ್ತಾರೆ ಎಂದು ಅನೇಕರು ಕಾಮೆಂಟ್​ ಮಾಡಿದ್ದಾರೆ.

ಮತೊಬ್ಬ ಟ್ವಿಟರ್​ ಬಳಕೆದಾರರಾದ ನರ್ಶಿಮಾ ಉಪಾಧ್ಯಾಯ ಅವರು ಕೂಡ ಇದೇ ರೀತಿಯಾಗಿ ವಿಡಿಯೋ ಟ್ವಿಟ್​ ಮಾಡಿದ್ದು “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಎಕ್ಸ್‌ಪ್ರೆಸ್‌ವೇಯಲ್ಲಿ ಯು-ಟರ್ನ್ ತೆಗೆದುಕೊಳ್ಳುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು “ಕೆಎಸ್​ಆರ್​ಟಿಸಿ ಚಾಲಕ ಜು.31ರಂದು ಬೆಳಗ್ಗೆ 8 ಗಂಟೆಗೆ ಬಿಡದಿ ಬಳಿ ರಿವರ್ಸ್ ತೆಗೆದುಕೊಂಡು ರಾಂಗ್ ಸೈಡ್‌ನಲ್ಲಿ ಹೋಗಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸಿದರೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುವ ಅನೇಕ ಅಪಘಾತಗಳಿಗೆ ಯಾರು ಹೊಣೆ? ಎನ್​ಹೆಚ್​ಎಐ ಅಥವಾ ತಿಳುವಳಿಕೆ ಇಲ್ಲಿದ ಚಾಲಕನೆ?” ಎಂದು ಕೆಎಸ್​ಆರ್​ಟಿಸಿ, ಎನ್​ಹೆಚ್​ಎಐ ಮತ್ತು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ ಟ್ಯಾಗ್​ ಮಾಡಿ ಪ್ರಶ್ನಿಸಿದ್ದಾರೆ.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ KSRTC “ನಿಮ್ಮ ಟ್ವಿಟರ್ ದೂರನ್ನು ಪರಿಶೀಲಿಸಲು ಸಂಬಂಧಿಸಿದ ವಿಭಾಗಕ್ಕೆ ರವಾನಿಸಲಾಗಿದೆ.” ಅಲ್ಲದೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.



Join Whatsapp