ಶಿವಮೊಗ್ಗ | ವಿದ್ಯುತ್‌ ಕಂಬಕ್ಕೆ ಬಸ್ ಡಿಕ್ಕಿ: 35 ವಿದ್ಯಾರ್ಥಿಗಳಿಗೆ ವಿದ್ಯುತ್ ಶಾಕ್

Prasthutha|

ಶಿವಮೊಗ್ಗ: ಖಾಸಗಿ ಬಸ್ಸೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್‌ ಹೊಡೆದೆ ಘಟನೆ ಸಾಗರದ ಹೊಳೆಬಾಗಿಲು ಸಮೀಪದ ಗೆಣಸಿನಕುಣಿ ಗ್ರಾಮದ ಸಮೀಪ ನಡೆದಿದೆ.

- Advertisement -


ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.


ಹೊಳೆಬಾಗಿಲಿನಿಂದ ಸಾಗರಕ್ಕೆ 45 ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಎಸ್ ಬಿಕೆ ಸಂಸ್ಥೆಗೆ ಸೇರಿದ ಖಾಸಗಿ ಬಸ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ 35 ವಿದ್ಯಾರ್ಥಿಗಳು ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ ಕೆಲವರು ಬಸ್ಸಿನೊಳಗೇ ಉರುಳಿ ಬಿದ್ದರು.



Join Whatsapp