‘ಸಸ್ಯಾಹಾರಿಗಳು ಮಾತ್ರ ಪ್ರವೇಶ’: ಪೋಸ್ಟರ್ ವಿರುದ್ಧ IIT-ಬಾಂಬೆ ವಿದ್ಯಾರ್ಥಿಗಳ ಆಕ್ರೋಶ

Prasthutha|

ಮುಂಬೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ (IIT) ಹಾಸ್ಟೆಲಿನ ಕ್ಯಾಂಟೀನ್ ಗೋಡೆಗಳಲ್ಲಿ ‘ಸಸ್ಯಾಹಾರಿಗಳು ಮಾತ್ರ ಪ್ರವೇಶ’ ಎಂಬ ಪೋಸ್ಟರ್ ಹಾಕಲಾಗಿದ್ದು, ಇದು ‘ಆಹಾರ ತಾರತಮ್ಯ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -


IIT ಹಾಸ್ಟೆಲ್ 12ರ ಕ್ಯಾಂಟೀನ್ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ’ ಎಂಬ ಪೋಸ್ಟರ್ ಗಳನ್ನು ಕಳೆದ ವಾರ ಹಾಕಲಾಗಿತ್ತು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ವಿದ್ಯಾರ್ಥಿ ಸಮೂಹವಾದ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಘಟನೆ ಖಂಡಿಸಿ, ಸಸ್ಯಾಹಾರಿಗಳು ಮಾತ್ರ ಎಂಬ ಪೋಸ್ಟರ್ ಗಳನ್ನು ಹರಿದು ಹಾಕಿದರು. “ಸಂಸ್ಥೆಯಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿ ಇಲ್ಲ. ಕೆಲವು ವ್ಯಕ್ತಿಗಳು ಕ್ಯಾಂಟೀನ್ನಲ್ಲಿ ನಿರ್ದಿಷ್ಟ ಪ್ರದೇಶವನ್ನು ಸಸ್ಯಾಹಾರಿಗಳಿಗೆ ಮಾತ್ರ ಎಂದು ತಾವೇ ನಿರ್ಧರಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಇತರ ವಿದ್ಯಾರ್ಥಿಗಳು ಆಹಾರ ಸೇವಿಸದಂತೆ ನಿರ್ಬಂಧಿಸಿದ್ದಾರೆ” ಎಂದು ದೂರಿದ್ದಾರೆ.

- Advertisement -


ಕ್ಯಾಂಟೀನ್ ಗೋಡೆಗಳ ಮೇಲೆ ಹಾಕಲಾಗಿರುವ ಪೋಸ್ಟರ್ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಐಐಟಿ ಬಾಂಬೆಯ ಅಧಿಕಾರಿಯೊಬ್ಬರು, “ಈ ರೀತಿಯ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ. ವಿವಿಧ ರೀತಿಯ ಆಹಾರವನ್ನು ಸೇವಿಸುವವರಿಗೆ ಇಲ್ಲಿ ನಿಗದಿತ ಸ್ಥಳವಿಲ್ಲ” ಎಂದು ಹೇಳಿದ್ದಾರೆ.



Join Whatsapp