ಮಹಿಳೆಯನ್ನು ಹತ್ಯೆ ಮಾಡಿ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಆರೋಪಿ

Prasthutha|

ಹೊಸದಿಲ್ಲಿ: ಮಹಿಳೆಯನ್ನು ಹತ್ಯೆ ಮಾಡಿ, ತನ್ನ ಮನೆಯ ಟೆರೇಸ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೈದ ಘಟನೆ ದೆಹಲಿಯ ದಾಬ್ರಿ ಪ್ರದೇಶದಲ್ಲಿ ನಡೆದಿದೆ.

- Advertisement -

ಮೃತ ಮಹಿಳೆಯನ್ನು ರೇಣು ಎಂದು ಗುರುತಿಸಲಾಗಿದೆ. ರೇಣುವನ್ನು ಹತ್ಯೆಗೈದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಮನೆಗೆ ತಲುಪಿದಾಗ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆರೋಪಿ ಆಶಿಶ್ ತನ್ನ ಮನೆಯ ಮೇಲ್ಛಾವಣಿಯ ಮೇಲೆ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಲು ಆಗಮಿಸಿದಾಗ ಮನೆಯ ಟೆರೇಸ್ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮಹಿಳೆಯ ಹತ್ಯೆಯ ಹಿಂದಿನ ಉದ್ದೇಶವಾಗಲಿ, ವ್ಯಕ್ತಿಯ ಆತ್ಮಹತ್ಯೆಯ ಹಿಂದಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.



Join Whatsapp