ಕುವೆಂಪು ವಿವಿ ಘಟಿಕೋತ್ಸವ: 3 ಸ್ವರ್ಣ ಪದಕ, ನಗದು ಬಹುಮಾನ ಪಡೆದ ಗಜಾಲ ಹಫೀಜ್

Prasthutha|

ಶಿವಮೊಗ್ಗ: ಚಿಕ್ಕಮಗಳೂರಿನ ಬಿ.ಇಡಿ ವಿದ್ಯಾರ್ಥಿನಿ ಗಜಾಲ ಹಫೀಜ್ ಪ್ರಥಮ ರ್ಯಾಂಕ್ ಪಡೆದು ಮೂರು ಚಿನ್ನದ ಪದಕ ಮತ್ತು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.

- Advertisement -

ಕಳೆದ ಶನಿವಾರ ಕುವೆಂಪು ವಿಶ್ವವಿದ್ಯಾನಿಲಯದ 33ನೇ ವರ್ಷದ ಘಟಿಕೋತ್ಸದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಜಾಲ ಹಫೀಜ್ ಅವರಿಗೆ ಪದವಿ ಪ್ರದಾನ ಮಾಡಿದರು.

ಗಜಾಲ ಹಫೀಜ್ ಅವರು ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ. ಅಜೀಜ್ ಅಹಮದ್ ಖಾನ್ ಅವರ ಪುತ್ರಿಯಾಗಿದ್ದಾರೆ.

- Advertisement -

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪದ್ಮಭೂಷಣ, ಪದ್ಮ ವಿಭೂಷಣ, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿಗಳಾದ ಡಾ.ಸುರೇಶ್ ಬಿ.ಎಸ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಈ ವೇಳೆ ಕುಲಪತಿಗಳಾದ ಪ್ರೊ.ವೀರಭದ್ರಪ್ಪ, ಕುಲಸಚಿವರಾದ ಗೀತ, ಮೌಲ್ಯಮಾಪನ ಕುಲಸಚಿವರಾದ ನವೀನ್ ಸೇರಿದಂತೆ ಸಿಂಡಿಕೇಟ್ ಸದಸ್ಯರು ಹಾಜರಿದ್ದರು.



Join Whatsapp