ಮಣಿಪುರ | ಮಹಿಳೆಯರ ಬೆತ್ತಲೆ ಮೆರವಣಿಗೆ ಪೈಶಾಚಿಕ ಕೃತ್ಯ: ವಿಮೆನ್ ಇಂಡಿಯಾ ಮೂವ್ಮೆಂಟ್

Prasthutha|

►ನಾಳೆ ರಾಜ್ಯಾದ್ಯಂತ WIM ಪ್ರತಿಭಟನೆ

- Advertisement -

ಬೆಂಗಳೂರು: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವ ಘಟನೆಯು ಪೈಶಾಚಿಕ, ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿದ್ದಾರೆ.

ಈ ಕುರಿತು ಪತ್ರಿಕ ಪ್ರಕಟಣೆ ಹೊರಡಿಸಿರುವ  ಅವರು, ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿದ್ದು ನೂರಾರು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿರುತ್ತಾರೆ. ಸಾವಿರಾರು ಕುಟುಂಬಗಳು ಪ್ರಾಣಭಿಕ್ಷೆಗಾಗಿ ಮೊರೆಯಿಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚು ದೌರ್ಜನ್ಯ ಒಳಪಡುತ್ತಿದ್ದಾರೆ.ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿ ಲೈಂಗಿಕ ಕಿರುಕುಳ ನೀಡಿ  ಸಾಮೂಹಿಕ ಅತ್ಯಾಚಾರಗೈದಿರುವ ಘಟನೆಯು ಅತ್ಯಂತ ಘೋರ ಕೃತ್ಯವಾಗಿದೆ.ಸಂತ್ರಸ್ತೆಯೋರ್ವಳು ಕಾರ್ಗಿಲ್ ಯೋಧನ ಪತ್ನಿಯಾಗಿದ್ದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

- Advertisement -

ಇಂತಹ ನೂರಾರು ಘಟನೆಗಳು ನಡೆದಿರುವುದರಿಂದ ಇಂಟರ್ನೆಟ್ ಬಂದ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿಯ ಬೇಜವಾಬ್ದಾರಿಯ ನಿಷ್ಕರುಣ, ನಿಸ್ಸಂಕೋಚ ಹೇಳಿಕೆಯು ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಕರೆಯಿತ್ತ ಸಾವರ್ಕರ್ ಮನಸ್ಥಿತಿಯಿಂದ ಮಾತ್ರ  ಬರಲು ಸಾಧ್ಯ.      ಘಟನೆಯಲ್ಲಿ ಪೋಲೀಸರ ನಿಷ್ಕ್ರಿಯತೆಯ ಕೂಡಾ ವರದಿಯಾಗಿದೆ.ವಾಸ್ತವದಲ್ಲಿ ಬೆತ್ತಲೆಯಾಗಿರುವುದು ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ.ಮತ್ತು ಇದು ಸರಕಾರೀ ಪ್ರಾಯೋಗಿಕ ಹತ್ಯಾಕಾಂಡವಾಗಿದೆ.

ದೇಶದ ಹೃದಯ ಭಾಗವಾಗಿರುವ ರಾಜಧಾನಿಯಲ್ಲಿ ಮಹಿಳಾ ಕ್ರೀಡಾಪಟುಗಳು ನ್ಯಾಯಕ್ಕಾಗಿ ಮೊರೆಯಿಡುತ್ತಿರಬೇಕಾದರೆ ಪ್ರಧಾನಿಯು ಮೌನವಹಿಸಿದ್ದರು. ಬಿಲ್ಕೀಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದವರನ್ನು     ‘ಸನ್ನಡತೆ ‘ ಹೆಸರಿನಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ದುಷ್ಕರ್ಮಿಗಳಿಗೆ ಇವು ಆಡಳಿತಾತ್ಮಕ ಧೈರ್ಯ  ನೀಡುತ್ತದೆ.ತಲೆತಗ್ಗಿಸಬೇಕಾದ ಮಣಿಪುರದ ಈ ಘಟನೆಯಲ್ಲೂ ಕೂಡ ಪ್ರಧಾನಿಯವರು ನಿರ್ಭಾವುಕವಾಗಿ ವರ್ತಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಆಗುತ್ತಿದೆ. ಮಹಿಳೆಯರಿಗೆ ಈ ದೇಶವು ಎಷ್ಟು ಅಸುರಕ್ಷಿತ ಎಂಬುದು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ಆದ್ದರಿಂದ ಈ ಘಟನೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಅತಿ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ನಡೆಸಬೇಕು.ಇಡೀ ಮಣಿಪುರದ ಹತ್ಯಾಕಾಂಡವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕು ಎಂದು ಫಾತಿಮಾ ನಸೀಮಾರವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿರುತ್ತಾರೆ.

ಇದನ್ನು ವಿರೋಧಿಸಿ ರಾಜ್ಯಾದ್ಯಂತ ಜಿಲ್ಲಾಕೇಂದ್ರಗಳಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ.



Join Whatsapp