ಒಂದೇ ಕುಣಿಕೆ ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು!

Prasthutha|

ಬೆಳಗಾವಿ: ಒಂದೇ ಹಗ್ಗಕ್ಕೆ ಪುತ್ರಿಯ ಜೊತೆಗೆ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

- Advertisement -

ಮಹಾದೇವಿ ಇಂಚಲ (34) ಚಾಂದನಿ ಇಂಚಲ (7) ಆತ್ಮಹತ್ಯೆಗೆ ಶರಣಾದವರು. ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ಇಂಚಲ ಅವರು ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದ ಯೋಧನನ್ನು ವರಿಸಿದ್ದರು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಹಾದೇವಿಯವರು ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿ ಜೊತೆಗೆ ವಾಸವಿದ್ದರು. ಇದೀಗ ಸಹೋದರ ಹಾಗೂ ನಾದಿನಿಯ ಕಿರುಕುಳದಿಂದ ಬೇಸತ್ತು ಪುತ್ರಿಯ ಜೊತೆಗೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

ಈ ಘಟನೆ ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



Join Whatsapp