ಗಗನಕ್ಕೇರಿದ ಬೆಲೆ: ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!

Prasthutha|

ವಾರಣಾಸಿ: ದೇಶದಲ್ಲಿ ಇದೀಗ ಟೊಮೆಟೊ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬಹುತೇಕ ಕಡೆ ಟೊಮೆಟೊ ಬೆಲೆ 200 ರೂಪಾಯಿ ಗಡಿ ದಾಡಿದೆ. ವಾರಣಾಸಿಯ ಲಂಕಾ ಪ್ರದೇಶದಲ್ಲಿ ಟೊಮೆಟೋ ಕೊಳ್ಳಲು ಬರುವ ಗ್ರಾಹಕರಿಂದ ವಾಗ್ವಾದ ಮತ್ತು ಮಾತಿನ ಚಕಮಕಿಗಳನ್ನು ತಪ್ಪಿಸಲು ತರಕಾರಿ ವ್ಯಾಪಾರಿಯೋರ್ವ ಬೌನ್ಸರ್‌ ಗಳನ್ನು ನೇಮಿಸಿಕೊಂಡ ಘಟನೆ ನಡೆದಿದೆ.

- Advertisement -


ಟೊಮೆಟೊ ಬೆಲೆ ಗಗನಕ್ಕೇರಿದ್ದು, ಆದ್ದರಿಂದ ಇಬ್ಬರನ್ನು ಜನರನ್ನು ನಿಯಂತ್ರಿಸಲೆಂದೇ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


ಮೋದಿಯವರ ಆಡಳಿತ ಇರುವಾಗಲೇ ಟೊಮ್ಯಾಟೊ ಬೆಲೆ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಜನರು ಹಿಂಸಾಚಾರದಲ್ಲಿ ತೊಡಗಿಕೊಂಡು ಟೊಮ್ಯಾಟೋವನ್ನು ಲೂಟಿ ಮಾಡುತ್ತಿರುವ ಸುದ್ದಿ ಬರುತ್ತಿದೆ. ಹಾಗಾಗಿ, ಟೊಮ್ಯಾಟೊ ಬೆಲೆ ಜಾಸ್ತಿಯಾಗಿರುವುದರಿಂದ ಬೌನ್ಸರ್‌ ಗಳನ್ನು ನೇಮಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.



Join Whatsapp