ವಿಟ್ಲ: ಕಾಲು ಸಂಕ ದಾಟುವಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.
ಕೇಶವ ನಾಯ್ಕ ಎಂ (51) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕೇಶವ ನಾಯ್ಕ ಅವರು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿರುವ ತನ್ನ ಬಾಡಿಗೆ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಬಳಿಯಿರುವ ನೀರು ಹರಿಯುವ ಸಾರ್ವಜನಿಕ ಕಣಿಗೆ ಹಾಕಿರುವ ಪಾಪನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕವುಚಿ ಬಿದ್ದು ಮೇಲೆ ಏಳಲು ಆಗದೇ ಮೃತಪಟ್ಟಿದ್ದಾರೆ.